ಜೋಪಡಿಯಲ್ಲೇ ಇದ್ದಿದ್ದರೆ ಊರಿಗೆ ಬೆಳಕಾಗುತ್ತಿರಲಿಲ್ಲ


Team Udayavani, Sep 8, 2018, 6:00 AM IST

16.jpg

ನಾನೇನು? ನನ್ನಂಥ ಲಕ್ಷಾಂತರ ಹೆಣ್ಣು ಮಕ್ಕಳು ಅವಕಾಶಕ್ಕಾಗಿ ಕಾಯುತ್ತಿ ದ್ದಾರೆ. ಅವರಿಗೆಲ್ಲ ಹೆತ್ತವರು ಸ್ವಾತಂತ್ರ್ಯ ನೀಡಿದರೆ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡುತ್ತಾರೆ ! ಈ ಮಾತು ಸರಿತಾ ಗಾಯಕ್ವಾಡ್‌ರದ್ದು. ಇವರು ಜೋಪಡಿ ಮನೆಯಲ್ಲಿ ಅರಳಿದ ಮಲ್ಲಿಗೆ.  
ಗುಜರಾತ್‌ನ ಡಾಂಗ್‌ ಜಿಲ್ಲೆಯ ಆದಿ ವಾಸಿಗಳ ಊರು ಕರಾಡಿ ಯಾಂಬ. ಯಾವುದೇ ಮೂಲ ಸೌಕರ್ಯ ಕೇಳ ಬಾರದು. ಗುಡ್ಡಗಾಡು ಪ್ರದೇಶ. ಇಲ್ಲಿರುವುದೇ 45 ಜೋಪಡಿಗಳು. ಎಲ್ಲರೂ ಬುಡಕಟ್ಟು ಜನಾಂಗದವರೇ. 

ಇದರಲ್ಲೊಂದು ಲಕ್ಷ್ಮಣ್‌ ಗಾಯ ಕ್ವಾಡ್‌-ರಮೂ ಬೆನ್‌ ಅವರ ಮನೆ. ಈಗೇನೋ ಇದು ಹಂಚು ಹೊದ್ದಿದೆ. ಈ ಮುರುಕು ಮನೆಯನ್ನೇ ಕ್ರೀಡಾ ಕ್ಷೇತ್ರದ ಮೊದಲ ಮೆಟ್ಟಿಲಾಗಿಸಿ ಜಕಾರ್ತಕ್ಕೆ ಹೋಗಿ ಚಿನ್ನ ಗೆಲ್ಲುವು ದೆಂದರೆ ಛಲ ವಿದ್ದವರಿಗೆ ಮಾತ್ರ. ಇದು ಈ ಮನೆಯ ಸರಿತಾರ ಜೀವನಗಾಥೆ.
ದೇಶದ 4×400 ಮೀ. ವನಿತಾ ತಂಡ ರಿಲೇಯಲ್ಲಿ ಚಿನ್ನದ ಜಯಿಸುವಲ್ಲಿ ಸರಿತಾರ ಪಾತ್ರ ಕಡಿಮೆ ಏನಿಲ್ಲ. 

ಈ ತಂಡದಲ್ಲೇ ನಮ್ಮ ಎಂ.ಆರ್‌. ಪೂವಮ್ಮ ಇದ್ದದ್ದು. ಪೂವಮ್ಮರೂ ಕಷ್ಟದ ಬದುಕನ್ನು ಸವೆಸಿಯೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದವರು.
ವರವಾಯಿತು “ಖೇಲ್‌ ಮಹಾಕುಂಭ್‌’ ಸರಿತಾಗೆ ಬಾಲ್ಯದಿಂದಲೂ ಓಡುವ ಗೀಳು. ಐದರ ಹರೆಯದಲ್ಲೇ ದೂರದ ಸಂಬಂಧಿಕರ ಮನೆಗೆ ತೆರಳಿ ಟಿವಿಯಲ್ಲಿ ಬರುವ ಕ್ರೀಡಾಕೂಟಗಳನ್ನು ವೀಕ್ಷಿಸುತ್ತಿದ್ದರು. ಖೋ ಖೋದಲ್ಲಿ ವಿಪರೀತ ಆಸಕ್ತಿ. ಶಾಲೆಯಲ್ಲಿ ಅದರಿಂದಲೇ ಖೋಖೋದಿಂದಲೇ ಕ್ರೀಡೆಗೆ ನಾಂದಿ. ಆದರೆ ಯಾವಾಗ ಗುಜರಾತ್‌ನ “ಸಾಯ್‌’ ಏರ್ಪಡಿಸಿದ “ಖೇಲ್‌ ಮಹಾಕುಂಭ್‌’ ನಲ್ಲಿ ಸರಿತಾ ಆಯ್ಕೆಯಾಗಿ 4 ಆ್ಯತ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಮಿಂಚಿದರೋ, ಅಲ್ಲಿಂದ ಹಾದಿಯೇ ಬದಲಾಯಿತು.

ಕೋಚರ್‌ ಕೆ.ಎಸ್‌. ಅಜಿಮೋನ್‌ ಅವರ ಮಾರ್ಗದರ್ಶನದಲ್ಲಿ  ಸರಿತಾ ಪೂರ್ಣ ಪ್ರಮಾಣದ ಓಟಗಾರ್ತಿಯಾದರು. ಆರಂಭದಲ್ಲಿ 400 ಮೀ. ದೂರವನ್ನು 60 ಸೆಕೆಂಡ್ಸ್‌ನಲ್ಲಿ ಕ್ರಮಿಸುತ್ತಿದ್ದ ಸರಿತಾ, ಈಗ 54 ಸೆಕೆಂಡ್ಸ್‌ನಲ್ಲಿದ್ದಾರೆ.  ಈ ಪ್ರಗತಿ ಸರಿತಾರ ಏಶ್ಯಾಡ್‌ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಂದಹಾಗೆ ಜಕಾರ್ತ ಏಶ್ಯಾಡ್‌ಗೆ ಗುಜರಾತ್‌ನಿಂದ ಆಯ್ಕೆಯಾದ ಮೊದಲ ಕ್ರೀಡಾಳು ಇವರೇ.

ರಾಖಿ ಸೋದರನ ಆರ್ಥಿಕ ನೆರವು
ಏಶ್ಯಾಡ್‌ಗೆ ಆಯ್ಕೆಯಾದರೂ ಸರಿತಾಗೆ ಆರ್ಥಿಕ ಸಂಕಟ ಬಿಟ್ಟಿರಲಿಲ್ಲ. ಜಕಾರ್ತಾದಲ್ಲಿ ಸಣ್ಣ ಮೌಲ್ಯದ ಶಾಪಿಂಗ್‌ ಮಾಡಲಿಕ್ಕೂ ಹಣದ ಕೊರತೆ ಇತ್ತು. ಆಗೆಲ್ಲ ಅವರು ರಾಖಿ ಸೋದರ ದರ್ಶನ್‌ ದೇಸಾಯಿ ಅವರನ್ನು ಸಂಪರ್ಕಿಸಿ ಹಣ ಕೋರುತ್ತಿದ್ದರು. ಸರಿತಾ ಜಕಾರ್ತಾದಲ್ಲಿದ್ದಾಗ ದರ್ಶನ್‌ ಕಳುಹಿಸಿದ ಮೊತ್ತ 45 ಸಾವಿರ ರೂ! ಕಳೆದೆರಡು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ತೋರಿದ ಸಾಧನೆಗೆ ತಲಾ 5 ಸಾವಿರ ರೂ. ಬಹುಮಾನ ಘೋಷಿಸಿದ್ದ ಸರಕಾರ ಇನ್ನೂ ನೀಡಿಲ್ಲ. ಇಂಥ ಆರ್ಥಿಕ ಮುಗ್ಗಟ್ಟುಗಳನ್ನು ಮೀರಿ ಬೆಳೆದ ಸರಿತಾಗೆ ದೊಡ್ಡದೊಂದು ಸಲಾಂ.

ಸಂಪ್ರದಾಯ ಮೀರಿದರು !
ಸರಿತಾ ಅವರ ಪ್ರಾದೇಶಿಕ ಹಿನ್ನೆಲೆ ಹಾಗೂ ಸಂಪ್ರದಾಯವನ್ನು ಗಮನಿಸಿದಾಗ ಅವರು ಈ ಎತ್ತರ ಏರಿದ್ದೇ ಒಂದು ಪವಾಡ. ಈ ಆದಿವಾಸಿಗಳಲ್ಲಿ ಹುಡುಗಿಯರಿಗೆ 16ರ ಹರೆಯದಲ್ಲೇ ಮದುವೆ ಮಾಡುತ್ತಾರೆ. ಇನ್ನು ವಿದ್ಯಾಭ್ಯಾಸವೋ, ಎಂಟರ ಅಂಕಿ ಮೀರುವಂತಿಲ್ಲ. ಸರಿತಾ ಹೆತ್ತವರೂ ವಿದ್ಯಾವಂತರಲ್ಲ. ಅವರೂ ಹೀಗೇ ಮಾಡಿದ್ದರೆ ಸರಿತಾ ಮತ್ತೂಂದು ಜೋಪಡಿಯಲ್ಲಿರುತ್ತಿದ್ದಳು. ಆದರೆ ಲಕ್ಷ್ಮಣ್‌-ರಮೂ ತಮ್ಮ ಮಗಳಿಗೆ ಕಟ್ಟುಪಾಡಿನಲ್ಲಿ ಬಂಧಿಸಲಿಲ್ಲ. 

ಸರಿತಾ ಸಾಧನೆ
2016ರ ವನಿತಾ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ, ಲಕ್ನೋ ಓಪನ್‌ ನ್ಯಾಶನಲ್‌ ಆ್ಯತ್ಲೆಟಿಕ್ಸ್‌  400 ಮೀ. ಓಟದಲ್ಲಿ ಕಂಚು, ಇದೇ  ಕೂಟದ 4,000 ಮೀ.  ಹರ್ಡಲ್ಸ್‌ನಲ್ಲಿ ಬೆಳ್ಳಿ. ಏಶ್ಯಾಡ್‌ನದ್ದೇ ದೊಡ್ಡ ಪದಕ.

ದೇಶದಲ್ಲಿ ನನ್ನಂಥ ಅದೆಷ್ಟೋ ಪ್ರತಿಭಾಶಾಲಿ ಹೆಣ್ಣು ಮಕ್ಕಳಿದ್ದಾರೆ. ಇವರಿಗೂ ಹೆತ್ತವರು ಸಂಪೂರ್ಣ ಸ್ವಾತಂತ್ರ್ಯ ನೀಡಿ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದರೆ ಖಂಡಿತವಾಗಿಯೂ ದೇಶವೇ ಹೆಮ್ಮೆಪಡುವಂಥ ಸಾಧನೆ ಮಾಡುತ್ತಾರೆ’
-ಸರಿತಾ ಗಾಯಕ್‌ವಾಡ್‌

 ಪಿ.ಕೆ. ಹಾಲಾಡಿ

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.