ಐಎಸ್ಎಸ್ಎಫ್ ಶೂಟಿಂಗ್: ಪುರುಷರ ಸ್ಕೀಟ್ ತಂಡ ಫೈನಲಿಗೆ
Team Udayavani, Sep 11, 2018, 6:40 AM IST
ಚಾಂಗ್ವೋನ್: ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಕಿರಿಯ ಪುರುಷರ ಸ್ಕೀಟ್ ತಂಡ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಕೂಟದ 9ನೇ ದಿನವಾದ ಸೋಮವಾರ ಭಾರತದ ಶೂಟರ್ಗಳಿಗೆ ಯಾವುದೇ ಪದಕ ಲಭಿಸಲಿಲ್ಲ.
ಕಿರಿಯ ಪುರುಷರ ಸ್ಕೀಟ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಗುರ್ನಿಹಾಲ್ ಸಿಂಗ್ ಗರ್ಚಾ 75ರಲ್ಲಿ 73 ಅಂಕ ಪಡೆದು 2ನೇ ಸ್ಥಾನ ಪಡೆದರು. ಅನಂತ್ಜೀತ್ ಸಿಂಗ್ ನರುಕ್ 71 ಅಂಕ ದೊಂದಿಗೆ 11ನೇ ಸ್ಥಾನ, ಆಯುಷ್ ರುದ್ರರಾಜು 70 ಅಂಕ ಗಳಿಸಿ 12ನೇ ಸ್ಥಾನದಲ್ಲಿ ಆಟ ಮುಗಿಸಿದರು. ಈ 3 ಸ್ಪರ್ಧಿಗಳ ಒಟ್ಟು 214 ಅಂಕ ತಂಡ ವಿಭಾಗದ ಫೈನಲ್ ಪ್ರವೇಶಿಸಲು ನೆರವಾಯಿತು. ಮಂಗಳವಾರ ವೈಯಕ್ತಿಕ ವಿಭಾಗದಲ್ಲಿ ಮತ್ತೆರಡು ಅರ್ಹತಾ ಸುತ್ತಿನ ಸ್ಪರ್ಧೆ ನಡೆಯಲಿದೆ.
ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅನೀಶ್ ಭನ್ವಾಲ್ 15ನೇ ಸ್ಥಾನಕ್ಕಿಳಿದು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ರ್ಯಾಪಿಡ್ ಫೈಯರ್ ಅರ್ಹತಾ ಸುತ್ತಿನಲ್ಲಿ 581 ಅಂಕ ಪಡೆದ ಅನೀಶ್, ಅಂತಿಮ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದರು. ಇದೇ ಸ್ಪರ್ಧೆಯಲ್ಲಿದ್ದ ಗುರ್ಪ್ರೀತ್ ಸಿಂಗ್ ಅರ್ಹತಾ ಸುತ್ತಿನಲ್ಲಿ 43ನೇ ಸ್ಥಾನ ಪಡೆದರೆ, ಶಿವಂ ಶುಕ್ಲಾ 46ನೇ ಸ್ಥಾನ ಗಳಿಸಿದರು. ಕಿರಿಯ ಪುರುಷರ 50 ಮೀ. ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ 5ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಆದರೆ ಫೈನಲ್ನಲ್ಲಿ 4ನೇ ಸ್ಥಾನಕ್ಕೆ ಕುಸಿದರು. ಈ ಸ್ಪರ್ಧೆಯಲ್ಲಿದ್ದ ಫತೇ ಸಿಂಗ್ ದಿಲ್ಲೋನ್ 38ನೇ ಸ್ಥಾನ, ಸಿ. ಸ್ಯಾಮ್ ಜಾರ್ಜ್ ಸಾಜನ್ 47ನೇ ಸ್ಥಾನಕ್ಕಿಳಿದರು. ತಂಡ ವಿಭಾಗದಲ್ಲಿ ಭಾರತ 10ನೇ ಸ್ಥಾನ ಪಡೆಯಿತು.
ವನಿತಾ 300ಮೀ. ರೈಫಲ್ ಪ್ರೋನ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಲಜ್ಜಾ ಗೋಸ್ವಾಮಿ 17ನೇ ಸ್ಥಾನ, ರಂಜನಾ ಗುಪ್ತಾ 33ನೇ ಸ್ಥಾನ ಪಡೆದರು. 9ನೇ ದಿನದ ಅಂತ್ಯಕ್ಕೆ ಭಾರತ 20 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?