ರಾತ್ರೋರಾತ್ರಿ ರಾಜ್ಯ ಕ್ರಿಕೆಟಿಗನಾದ ಕ್ರೀಡೋಪಕರಣ ವ್ಯಾಪಾರಿ!

Team Udayavani, Sep 23, 2018, 6:00 AM IST

aaaaaa.jpg

ಪುದುಚೇರಿ: ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿ 9 ಹೊಸ ತಂಡಗಳಿಗೆ ಆಡಲೇನೋ ಬಿಸಿಸಿಐ ಅವಕಾಶ ಕೊಟ್ಟಿದೆ. ಆದರೆ ಸ್ಥಳೀಯವಾಗಿ ಯೋಗ್ಯ ಆಟಗಾರರಿಲ್ಲದೇ ಸಂಬಂಧಪಟ್ಟ ರಾಜ್ಯಗಳು ಪರದಾಡುತ್ತಿವೆ. ಆಟಗಾರರನ್ನು ದಿಢೀರನೆ ತಂಡಕ್ಕೆ ತುಂಬಿಕೊಳ್ಳಲು ಈ ರಾಜ್ಯಗಳು ಮಾಡುತ್ತಿರುವ ಹರಸಾಹಸದಿಂದ ಹಲವು ಸ್ವಾರಸ್ಯಕರ ಕತೆಗಳು ಹುಟ್ಟಿಕೊಳ್ಳುತ್ತಿವೆ. ಪುದುಚೇರಿಯಲ್ಲಿ ರಾತ್ರೋರಾತ್ರಿ ಕ್ರೀಡೋಪಕರಣಗಳ ವ್ಯಾಪಾರಿಯೊಬ್ಬರು ರಾಜ್ಯಮಟ್ಟದ ಕ್ರಿಕೆಟಿಗರಾದ ಕತೆಯೂ ಇದರಲ್ಲೊಂದು.

ಕ್ರೀಡೋಪಕರಣಗಳನ್ನು ಮಾರಿಕೊಂಡು, ಅಲ್ಪಸ್ವಲ್ಪ ಕ್ರಿಕೆಟ್‌ ಅಭ್ಯಾಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ ಸೈಜು ಟೈಟಸ್‌ (36 ವರ್ಷ), ಮಾಮೂಲಿ ಆಟಗಾರರು ನಿವೃತ್ತಿಯಾಗುವ ವಯಸ್ಸಿನಲ್ಲಿ ಪುದುಚೇರಿ ರಾಜ್ಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ! ಗುರುವಾರ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದಾಗ ಕರೆ ಬಂದಿದೆ. ಗುರುವಾರ ಮಧ್ಯರಾತ್ರಿ 2.30ಕ್ಕೆ 2,400 ಕಿ.ಮೀ. ಪ್ರಯಾಣ ಮಾಡಿ ವಡೋದರ ತಲುಪಿದ್ದಾರೆ. ಶುಕ್ರವಾರ ಬೆಳಗ್ಗೆ ಉತ್ತರಾಖಂಡ ಪರ ಆಡಲಿಳಿದಿದ್ದಾರೆ. ಅದೂ ನಿದ್ರೆಯಿಲ್ಲದೇ!

ಹೊರರಾಜ್ಯಗಳ ಆಟಗಾರರಿಗೆ ಸಮ್ಮತಿ
ಬಿಸಿಸಿಐ ಈ ಬಾರಿ 9 ಹೊಸ ರಾಜ್ಯಗಳನ್ನು ದೇಶಿಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಸಿದೆ. ಆ ಪೈಕಿ ಪುದುಚೇರಿಯೂ ಒಂದು. ಆದರೆ ಈ ರಾಜ್ಯಗಳಲ್ಲಿ ಸ್ಥಳೀಯವಾಗಿ ಪ್ರತಿಭೆಗಳೇ ಇಲ್ಲ. ಅದೇ ಕಾರಣಕ್ಕೆ ಹೊರರಾಜ್ಯದ ಆಟಗಾರರನ್ನು ಅವಲಂಬಿಸಿ ಆಡುತ್ತಿವೆ. ಅದಕ್ಕೆ ಬಿಸಿಸಿಐ ವಿಶೇಷ ವಿನಾಯಿತಿಯನ್ನೂ ನೀಡಿದೆ. ಇಂತಹ ವಿನಾಯಿತಿಯನ್ನು ಸ್ವಲ್ಪ ಜಾಸ್ತಿಯೇ ಬಳಸಿಕೊಂಡ ಪುದುಚೇರಿ ತನ್ನ ತಂಡದಲ್ಲಿ ಹೊರರಾಜ್ಯದವರನ್ನೇ ಸೇರಿಸಿಕೊಂಡು ಮೊನ್ನೆ ಬುಧವಾರ ಮೊದಲ ಪಂದ್ಯವಾಡಿತು. ಇದು ರಾಜ್ಯ ಆಟಗಾರರಿಗೆ ಮಾಡುವ ಅನ್ಯಾಯ, ಬಿಸಿಸಿಐನ ಉದ್ದೇಶವನ್ನೇ ಪುದುಚೇರಿ ಕ್ರಿಕೆಟ್‌ ಸಂಸ್ಥೆ ಹಾಳು ಮಾಡಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಬಿಸಿಸಿಐ 8 ಹೊರರಾಜ್ಯದ ಆಟಗಾರರ ಆಯ್ಕೆಯನ್ನು ರದ್ದುಗೊಳಿಸಿತು.

ಬುಧವಾರ ಬಿಸಿಸಿಐ ಈ ನಿರ್ಧಾರ ಮಾಡಿತು. ಶುಕ್ರವಾರ 2ನೇ ಪಂದ್ಯ ಆಡಬೇಕಾಗಿದ್ದರಿಂದ ಪುದುಚೇರಿ ಕ್ರಿಕೆಟ್‌ ಸಂಸ್ಥೆ ಇಕ್ಕಟ್ಟಿಗೆ ಸಿಕ್ಕಿತು. ಬದಲೀ ಆಟಗಾರರೇ ಇಲ್ಲದ ಸ್ಥಿತಿಯಲ್ಲಿ ಅಲ್ಪಸ್ವಲ್ಪ ಕ್ರಿಕೆಟ್‌ ಗೊತ್ತಿದ್ದವರಿಗೆಲ್ಲ ಪದಾಧಿಕಾರಿಗಳು ಕರೆ ಮಾಡಿದರು. ಅಂತಹದ್ದೇ ಒಂದು ಗಳಿಗೆಯಲ್ಲಿ ಕರೆ ಹೋಗಿದ್ದು ಸೈಜು ಟೈಟಸ್‌, ವಿಕೆ°àಶ್ವರ್‌ ಶಿವಸಂಗರ್‌, ಸಾಜು ಚೋಥಾನ್‌, ಎ.ಎಂ. ನಾರಾಯಣನ್‌, ಮಗೇಂದ್ರನ್‌ ಚಿನ್ನದುರೈ, ರಂಜಿತ್‌ ಬಾಸ್ಕರನ್‌ ಅವರಿಗೆ. ಈ ಪೈಕಿ ಸೈಜು, ವಿಕೆ°àಶ್ವರ್‌, ನಾರಾಯಣನ್‌ ಆಡುವ ಅವಕಾಶವನ್ನೂ ಪಡೆದರು.

ಸಾಗಿತು ರಾತ್ರೋರಾತ್ರಿ ಪಯಣ…
ಬುಧವಾರ ತಡರಾತ್ರಿ ಚೆನ್ನೈನಿಂದ ಸೈಜು ಹಿಂತಿರುಗಿದ್ದರು. ಗುರುವಾರ ಬೆಳಗ್ಗೆ ಕೂಡಲೇ ಹೊರಡಿ ಎಂದು ಕರೆ ಬಂದಿದ್ದರಿಂದ ಸಂಭ್ರಮವೋ, ಅಚ್ಚರಿಯೋ ಗೊತ್ತಾಗದ ಸ್ಥಿತಿಯಲ್ಲಿ ಸೈಜು ಬೆಂಗಳೂರಿಗೆ ಬಂದರು. ಅಲ್ಲಿಂದ ತತ್‌ಕ್ಷಣ ವಿಮಾನ ಸಿಗದೇ ತಡವಾಗಿ ಮುಂಬಯಿ ತಲುಪಿದರು. ಮುಂಬಯಿಯಿಂದ ವಡೋದರಕ್ಕೆ ಟ್ಯಾಕ್ಸಿ ಮಾಡಿಕೊಂಡು ತಲುಪಿದರು. ಇದು ಒಟ್ಟು 2,400 ಕಿ.ಮೀ. ದೂರದ ಪ್ರಯಾಣವಾಗಿತ್ತು. 8 ಗಂಟೆಗೆ ಮೈದಾನ ಮುಟ್ಟಿದಾಗ ಆಡುತ್ತೇನೋ, ಇಲ್ಲವೋ ಎನ್ನುವುದೂ ಸೈಜುಗೆ ಗೊತ್ತಿರಲಿಲ್ಲ!

ತಂಡದಲ್ಲಿ ಸ್ಥಾನ ಸಿಕ್ಕಿದಾಗ ಸೈಜು ಬಹಳ ಹೆದರಿದ್ದರಂತೆ. ಅದರಲ್ಲೂ ಅವರು ಬ್ಯಾಟಿಂಗ್‌ಗಿಳಿದಾಗ ಮತ್ತೂಂದು ತುದಿಯಲ್ಲಿ ಖ್ಯಾತ ಆಟಗಾರ ಅಭಿಷೇಕ್‌ ನಾಯರ್‌ ಆಡುತ್ತಿದ್ದರು. ಈ ಒತ್ತಡದಲ್ಲೂ ಸೈಜು 24 ಎಸೆತ ಎದುರಿಸಿ 10 ರನ್‌ ಮಾಡಿದರು. ಇದರ ಮಧ್ಯಯೇ ರನೌಟಾಗಿ ಹೊರಹೋಗುವ ಯತ್ನವನ್ನೂ ನಡೆಸಿದ್ದೆ ಎಂದು ಸೈಜು ಸಂಕೋಚದಿಂದ ಹೇಳಿಕೊಂಡಿದ್ದಾರೆ!

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.