ವಿಶ್ವಕಪ್ ಹಾಕಿ : ಆಕ್ರಮಣಕಾರಿ ಆಟ; ಆರ್ಜೆಂಟೀನಾ ಜಯ
Team Udayavani, Nov 30, 2018, 6:00 AM IST
ಭುವನೇಶ್ವರ: ವಿಶ್ವಕಪ್ ಹಾಕಿ ಕೂಟದ ಗುರುವಾರ ಮುಖಾಮುಖೀಯ ಆಕ್ರಮಣಕಾರಿ ಆಟದಲ್ಲಿ ಸ್ಪೇನ್ ವಿರುದ್ಧ ಆರ್ಜೆಂಟೀನಾ ಮೇಲುಗೈ ಸಾಧಿಸಿದೆ. ರೋಚಕ ಹೋರಾಟದಲ್ಲಿ ಆರ್ಜೆಂಟೀನಾ 4-3 ಗೋಲುಗಳ ಜಯ ಸಾಧಿಸಿದೆ.
ಈ ಮುಖಾಮುಖೀಯಲ್ಲಿ ದಾಖಲಾದ ಒಟ್ಟು 7 ಗೋಲುಗಳಲ್ಲಿ 5 ಗೋಲು ಮೊದಲ ಕ್ವಾರ್ಟರ್ನಲ್ಲೇ ಸಿಡಿದಿತ್ತು ಎಂಬುದು ಪಂದ್ಯದ ತೀವ್ರತೆಗೆ ಸಾಕ್ಷಿ. ಆರ್ಜೆಂಟೀನಾ ಪರ ಆಗಸ್ಟಿನ್ ಮಝಿಲ್ಲಿ (4ನೇ ಹಾಗೂ 15ನೇ ನಿಮಿಷ) ಮತ್ತು ಗೊಂಝಾಲೊ ಪೀಲರ್ (15ನೇ ಹಾಗೂ 49ನೇ ನಿಮಿಷ) ಅವಳಿ ಗೋಲು ಬಾರಿಸಿ ಮೆರೆದರು. ಸ್ಪೇನ್ ಪರ ಎನ್ರಿಕ್ ಗೊಂಝಾಲೆಸ್ (3ನೇ ನಿಮಿಷ), ಜೋಸೆಫ್ ರೋಮಿಯೊ (14ನೇ ನಿಮಿಷ) ಮತ್ತು ವಿಸೆನ್ಸ್ ರುಯಿಜ್ (35ನೇ ನಿಮಿಷ) ಗೋಲು ದಾಖಲಿಸಿದರು.