CONNECT WITH US  

91 ನಿಗಮ, ಮಂಡಳಿಗೆ ಕಡೆಗೂ ಅಧ್ಯಕ್ಷ ಭಾಗ್ಯ

ಬೆಂಗಳೂರು: ಕಡೆಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. 91 ನಿಗಮ ಮಂಡಳಿಗಳಿಗೆ ನೇಮಕ ಆದೇಶ ಹೊರಬಿದ್ದಿದ್ದು, ಈ ಪೈಕಿ 21 ಮಂದಿ ಶಾಸಕರು ಹಾಗೂ 70 ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅವಕಾಶ ಪಡೆದಿದ್ದಾರೆ. ಇವರು ಕಾಂಗ್ರೆಸ್‌ ಸರ್ಕಾರದ ಉಳಿದ ಅವಧಿಯಾದ 19 ತಿಂಗಳು ಅಧಿಕಾರ ಅನುಭವಿಸಲಿದ್ದಾರೆ. ನಿರೀಕ್ಷೆಯಂತೆಯೇ ಅತ್ಯಂತ ಪ್ರಮುಖ ನಿಗಮ ಮಂಡಳಿಗಳು ಶಾಸಕರ ಬುಟ್ಟಿಗೆ ಬಿದ್ದಿದೆ. ಅದರಲ್ಲೂ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಾಬುರಾವ್‌ ಚಿಂಚನಸೂರು ಅವರು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಗಿಟ್ಟಿಸಿದ್ದಾರೆ. ಬಿಡಿಎ ಅಧ್ಯಕ್ಷ ಪಟ್ಟ ಸಿದ್ದರಾಮಯ್ಯ ಅವರ ಆಪ್ತ ಪಿರಿಯಾಪಟ್ಟಣ ವೆಂಕಟೇಶ್‌ ಅವರಿಗೆ ಲಭಿಸಿದೆ. ಕೆಎಸ್ಸಾರ್ಟಿಸಿಗೆ ಪಟ್ಟು ಹಿಡಿದಿದ್ದ ಚಿಕ್ಕಪೇಟೆಯ ಆರ್‌.ವಿ.ದೇವರಾಜ್‌ ಅವರಿಗೆ ಮತ್ತೂಂದು ಮಹತ್ವದ ನಿಗಮ ಮಂಡಳಿಯಾದ ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿ ಸಮಾಧಾನ ಪಡಿಸಲಾಗಿದೆ. ಇನ್ನೂ ನಿಗಮ ಮಂಡಳಿ ಬೇಡ ಎಂದಿದ್ದ ಶಾಸಕರ ಪೈಕಿ ಡಾ|ಎ.ಬಿ.ಮಾಲಕರಡ್ಡಿ ಮಾತ್ರ ತಮ್ಮ ನಿಲುವಿಗೆ ಅಂಟಿಕೊಂಡಿದ್ದು, ಯಾವ ಸ್ಥಾನವನ್ನು ಪಡೆದಿಲ್ಲ. ಆದರೆ, ಹುದ್ದೆ ಬೇಡ ಎಂದಿದ್ದ ಶಿವಾನಂದ. ಎಸ್‌.ಪಾಟೀಲ ಸೇರಿದಂತೆ ಹಲವು ಶಾಸಕರನ್ನು ಖುದ್ದು ಸಿಎಂ ಅವರೇ ಮನವೊಲಿಸಿದ್ದು, ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಿವಾನಂದ ಪಾಟೀಲ ಅವರಿಗೆ ಮಹತ್ವದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಲಭಿಸಿದೆ.

ಪ್ರಮುಖ ನೇಮಕಗಳು
ಸಚಿವ ಸ್ಥಾನ ಕಳಕೊಂಡ ಬಾಬುರಾವ್‌ ಚಿಂಚನಸೂರ್‌ಗೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೆಎಸ್ಸಾರ್ಟಿಸಿ ಕೇಳಿದ್ದ ಆರ್‌.ವಿ.ದೇವರಾಜ್‌ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಎಂಎಲ್‌ಸಿ ಆಕಾಂಕ್ಷೆ ಇದ್ದ ಸಾಹಿತಿ ಪ್ರೊ| ಸ್‌.ಜಿ.ಸಿದ್ದರಾಮಯ್ಯ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆದ ಶಾಸಕರಲ್ಲಿ ಕುಮಟಾ ಕ್ಷೇತ್ರದ ಶಾರದಾ ಮೋಹನ ಶೆಟ್ಟಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಿರಿಯರೇ. ಮೊದಲ ಬಾರಿಗೆ ಶಾಸಕರಾದವರಿಗೆ ನಿಗಮ ಮಂಡಳಿ ಸ್ಥಾನ ನೀಡಬಾರದು ಎಂಬ ನಿಯಮವನ್ನು ಶಾರದಾ ಅವರಿಗಾಗಿ ಸಡಿಲಿಸಲಾಗಿದ್ದು, ರಾಜ್ಯಸಭಾ ಸದಸ್ಯ ಆಸ್ಕರ್‌ ಫ‌ರ್ನಾಂಡಿಸ್‌ ಪ್ರಭಾವದಿಂದ ಶಾರದಾ ಅವರು ಪ್ರಥಮ ಬಾರಿಗೆ ಶಾಸಕರಾದರೂ ಸ್ಥಾನ ಗಿಟ್ಟಿಸಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಾಮಕರಣಗೊಳ್ಳಲು ಆಕಾಂಕ್ಷಿಯಾಗಿದ್ದ ಸಾಹಿತಿ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ದೊರಕಿದೆ.

ಹೆಚ್ಚುವರಿ ಹೆಸರಿಗೆ ಒಪ್ಪಿಗೆ ಪಡೆದಿದ್ದ ಸಿಎಂ: ಕುತೂಹಲಕಾರಿ ಸಂಗತಿಯೆಂದರೆ ನೇಮಕ ಮಾಡಲು 91 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮಾತ್ರ ಲಭ್ಯವಿದ್ದರೂ ರಾಜ್ಯ ನಾಯಕತ್ವವು 117 ಹೆಸರುಗಳಿಗೆ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ. ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿ ನೇಮಕಾತಿ ಮಾಡಬೇಕು ಎಂಬ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ನಾಯಕರಿಂದಲೂ ನೇಮಕಾತಿಗಾಗಿ ಹೆಸರುಗಳನ್ನು ಪಡೆಯಲಾಗಿತ್ತು. ಹೀಗೆ ಪಡೆದ ಹೆಸರುಗಳನ್ನು ಹಲವು ಹಂತದಲ್ಲಿ ಪರಿಷ್ಕರಿಸಿ ಅಂತಿಮವಾಗಿ 117 ಹೆಸರುಗಳಿದ್ದ ಪಟ್ಟಿಗೆ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆಯಲಾಗಿತ್ತು. ಆದರೆ, ಈ ಎಲ್ಲಾ 117 ಮಂದಿಗೂ ಅವಕಾಶ ನೀಡುವಷ್ಟು ನಿಗಮ ಮಂಡಳಿಗಳು ಲಭ್ಯವಿಲ್ಲ ಎಂಬ ಅಂಶವನ್ನು ಅನಂತರ ಹೈಕಮಾಂಡ್‌ಗೆ ತಿಳಿಸಿ, ಕೆಲವು ಹೆಸರನ್ನು ಪರಿಷ್ಕರಿಸಲು ಅನುಮತಿಯನ್ನು ರಾಜ್ಯ ನಾಯಕತ್ವ ಕೋರಿತ್ತು. ಅಂತಿಮ ಹಂತದಲ್ಲಿ ಹೈಕಮಾಂಡ್‌ ಕೂಡ ಇದಕ್ಕೆ ಒಪ್ಪಿಗೆ ನೀಡಿದ ನಂತರ ಕೆಲ ಪ್ರಮುಖ ನಾಯಕರು ಸೂಚಿಸಿದ್ದ ಹೆಸರುಗಳಿಗೆ ಕತ್ತರಿ ಪ್ರಯೋಗ ಮಾಡಿ ಪಟ್ಟಿಯನ್ನು 91ಕ್ಕೆ ಇಳಿಸಲಾಗಿದೆ ಎನ್ನುತ್ತವೆ ಮೂಲಗಳು. ಇದು ನಿಜವೇ ಆಗಿದ್ದರೆ, ಪ್ರಮುಖ ನಾಯಕರು ಅಪಸ್ವರವೆತ್ತುವ ಎಲ್ಲಾ ಸಾಧ್ಯತೆಗಳು ಇವೆ.

ದೇವರಾಜ್‌ V/s ರಾಮಲಿಂಗಾರೆಡ್ಡಿ
ಕೆಎಸ್ಸಾರ್ಟಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಚಿಕ್ಕಪೇಟೆ ಶಾಸಕ ಆರ್‌.ವಿ. ದೇವರಾಜ್‌ ಹಾಗೂ ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ತೀವ್ರ ಮುಸುಕಿನ ಗುದ್ದಾಟ ನಡೆದಿತ್ತು. ದೇವರಾಜ್‌ ಪ್ರಭಾವಕ್ಕೆ ಮಣಿದ ರಾಜ್ಯ ನಾಯಕತ್ವ ಅವರಿಗೆ ಕೆಎಸ್ಸಾರ್ಟಿಯ ಅಧ್ಯಕ್ಷ ಹುದ್ದೆಯನ್ನು ನೀಡಲು ಮುಂದಾಗಿತ್ತು. ಆದರೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದೇವರಾಜ್‌ ಅವರಿಗೆ ಕೆಎಸ್ಸಾರ್ಟಿಸಿ ಹುದ್ದೆ ನೀಡುವುದಾದರೆ ತಮ್ಮ ಸಾರಿಗೆ ಖಾತೆ ಬದಲಿಸಿ ಎಂದು ಪಟ್ಟುಹಿಡಿದರು ಎನ್ನಲಾಗಿದೆ. ಈ ಹಂತದಲ್ಲಿ ದೇವರಾಜ್‌ ಹಾಗೂ ರೆಡ್ಡಿ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆದಿತ್ತು.

ಹುದ್ದೆ ಪಡೆದ ಕಾರ್ಯಕರ್ತರು:
ಪ್ರೊ. ಎಸ್‌.ಜಿ. ಸಿದ್ದರಾಮಯ್ಯ- ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಮಲ್ಲಿಗೆ ವಿರೇಶ್‌-ಅಧ್ಯಕ್ಷೆ, ಮೃಗಾಲಯ ಪ್ರಾಧಿಕಾರ. ಶಶಿಕಲಾ ಬಿ ಕಾವಳೆ-ಅಧ್ಯಕ್ಷೆ, ಸಂಬಾರ ಮಂಡಳಿ. ಡಿ. ಶಂಕರ್‌-ಅಧ್ಯಕ್ಷ, ಡಾ. ಬಾಬು ಜಗಜೀವನರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ. ಮಾನಯ್ಯ-ಅಧ್ಯಕ್ಷ, ಕೇಂದ್ರ ಪರಿಹಾರ ಸಮಿತಿ. ಎಂ.ಆರ್‌. ವೆಂಕಟೇಶ್‌-ಅಧ್ಯಕ್ಷ, ಸಫಾಯಿ ಕರ್ಮಚಾರಿ ಆಯೋಗ. ಪದ್ಮಿನಿ ಪೊನ್ನಪ್ಪ-ಉಪಾಧ್ಯಕ್ಷೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ. ನಸೀರ್‌ ಅಹ್ಮದ್‌ - ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ. ಎಂ.ಎ. ಗಫ‌ೂರ್‌-ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. ಎಚ್‌ .ಪಿ. ಮೋಹನ್‌-ಅಧ್ಯಕ್ಷ, ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ. ಎ.ಎನ್‌. ಮೋಹನ್‌- ಅಧ್ಯಕ್ಷರು, ಕರ್ನಾಟಕ ಜಂಗಲ್‌ ಲಾಡ್ಜಸ್‌. ಎ. ವೆಂಕಟೇಶ್‌- ಅಧ್ಯಕ್ಷರು, ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಶ್‌. ಎ.ಮುನಿಯಪ್ಪ- ಅಧ್ಯಕ್ಷರು, ಎಸ್‌.ಸಿ.ಎಸ್‌ಟಿ ಆಯೋಗ. ಪ್ರೊ. ಬಸವರಾಜ ರಾಮನಾಳ- ಅಧ್ಯಕ್ಷರು, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ. ಸುಂದರೇಶ್‌- ಅಧ್ಯಕ್ಷರು, ಕಾಡಾ, ಭದ್ರಾ ಜಲಾಶಯ. ಮಾಗಡಿ ಕಮಲಮ್ಮ- ಅಧ್ಯಕ್ಷರು, ಕರ್ನಾಟಕ ಕರ-ಕುಶಲ ಅಭಿವೃದ್ಧಿ ನಾಗಲಕ್ಷ್ಮೀಬಾಯಿ- ಅಧ್ಯಕ್ಷರು, ಮಹಿಳಾ ಆಯೋಗ. ಸಿ.ಎಂ. ಧನಂಜಯ- ಅಧ್ಯಕ್ಷರು, ಕರ್ನಾಟಕ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ. ರಘು ದೇವರಾಜ- ಅಧ್ಯಕ್ಷರು, ಎಂಸಿಅಂಡ್‌ಎ. ಎಸ್‌. ಮನೋಹರ್‌- ಅಧ್ಯಕ್ಷರು, ಕರ್ನಾಟಕ ವಿದ್ಯುತ್‌ ಕಾರ್ಖಾನೆ. ವೆಂಕಟಚಲಪತಿ- ಅಧ್ಯಕ್ಷರು, ತೆಂಗು-ನಾರು ಅಭಿವೃದ್ಧಿ ಮಂಡಳಿ. ಹನುಮಂತರಾಯಪ್ಪ- ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ಸ್‌. ಎನ್‌. ರಮೇಶ್‌- ಅಧ್ಯಕ್ಷರು, ಖಾದಿ ಅಭಿವೃದ್ಧಿ ನಿಗಮ. ಬಿ.ಬಾಲರಾಜ್‌- ಅಧ್ಯಕ್ಷರು, ತಾಂಡಾ ಅಭಿವೃದ್ಧಿ ನಿಗಮ. ಜೆ. ಹುಚ್ಚಪ್ಪ-ಅಧ್ಯಕ್ಷರು, ದೇವರಾಜು ಅರಸು ಅಭಿವೃದಿಟಛಿ ನಿಗಮ. ಜಿ. ಕೃಷ್ಣ- ಅಧ್ಯಕ್ಷರು, ಕರ್ನಾಟಕ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮ. ಎಸ್‌.ಇ. ಸುಧೀಂದ್ರ- ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮ. ಎಂ.ಎಸ್‌. ಬಸರಾಜು- ಅಧ್ಯಕ್ಷರು, ಅಂಬೇಡ್ಕರ್‌ ಅಭಿವೃದ್ಧಿ ನಿಗಮ. ನಾಗರಾಜ ಜಾಧವ್‌- ಅಧ್ಯಕ್ಷರು, ಬಿಎಂಟಿಸಿ. ಭಾರತಿ ಶಂಕರ್‌- ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ. ಅಶ್ವಿ‌ನಿ ಕೃಷ್ಣಮೂರ್ತಿ- ಅಧ್ಯಕ್ಷರು, ಕಂಠೀರವ ಸ್ಟುಡಿಯೋ. ಶಫಿಯುಲ್ಲಾ- ಅಧ್ಯಕ್ಷರು, ಬಿಐಎಪಿಪಿಎ. ರೋಷನ್‌ ಅಲಿ- ಅಧ್ಯಕ್ಷರು, ಕ್ರೀಡಾ ಪ್ರಾಧಿಕಾರ

Trending videos

Back to Top