CONNECT WITH US  

ಕೇಂದ್ರದಿಂದ ರೈತರ ಸಾಲ ಮನ್ನಾ ಇಲ್ಲ

ಬಾಗಲಕೋಟೆ: ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲಮನ್ನಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದು, ಅದಕ್ಕೆ ಜೇಟ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರ ನೇರವಾಗಿ ಸಾಲಮನ್ನಾ ಮಾಡಲ್ಲ. ರಾಜ್ಯಕ್ಕೆ ಲಕ್ಷಾಂತರ ಕೋಟಿ ಅನುದಾನ ಕೊಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ನೇ ಹಣಕಾಸು ಯೋಜನೆಯಡಿ ಮೂರು ವರ್ಷದಲ್ಲಿ 76,400 ಕೋಟಿ, ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳಡಿ 28,258 ಕೋಟಿ, ಬರ ಪರಿಹಾರದಡಿ 4290 ಕೋಟಿ ರೂ., ನೀತಿ ಆಯೋಗದ ಶಿಫಾರಸ್ಸು ಅನ್ವಯ 1,13,478 ಕೋಟಿ ರೂ. ಅನುದಾನ ರಾಜ್ಯಕ್ಕೆ ಕೊಡಲಾಗಿದೆ. ಪ್ರಧಾನಿ ಕೃಷಿ
ವಿಕಾಸ ಯೋಜನೆಯಡಿ 2015-16ರಲ್ಲಿ 229 ಕೋಟಿ ರೂ., 2016-17ನೇ ಸಾಲಿಗೆ 60 ಕೋಟಿ ರೂ.ನೀಡಲಾಗಿದೆ. ಇಷ್ಟೊಂದು ಅನುದಾನವನ್ನು ರಾಜ್ಯಕ್ಕೆ ಕೇಂದ್ರ ಕೊಟ್ಟಿರುವಾಗ, ರೈತರ ನೆರವಿಗೆ ಬರುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

3 ಲಕ್ಷ ಕೋಟಿ ರೂ. ಆದಾಯ: ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದಾರೆ. ಇದರಿಂದ 3 ಲಕ್ಷ ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಬರಲಿದೆ. ಇದರಿಂದ ಭಾರತ ಆರ್ಥಿಕ ಸದೃಢತೆ ಹೊಂದಲಿದ್ದು, ಇಂತಹ ಹಲವಾರು ಕ್ರಾಂತಿಕಾರಕ ಯೋಜನೆಗಳಿಂದ ಕಾಂಗ್ರೆಸ್‌ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

Trending videos

Back to Top