CONNECT WITH US  

ಸಿದ್ದೇಶ್ವರ ವಿರುದ್ಧವೂ ಬಿಜೆಪಿ ಪ್ರತಿಭಟಿಸುತ್ತಾ?

ಬೆಳಗಾವಿ: ಆದಾಯ ತೆರಿಗೆ ದಾಳಿ ಹಾಗೂ ಚುನಾವಣೆ ಸೇರಿ ಯಾವುದೇ ವಿಷಯದಲ್ಲೂ ಬಿಜೆಪಿಗೆ ಸಮರ್ಥ ತಿರುಗೇಟು ನೀಡುವ ಶಕ್ತಿ ಹಾಗೂ ಯುಕ್ತಿ ನಮಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಎಷ್ಟು ಜನ ಭ್ರಷ್ಟರಿದ್ದಾರೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದನ್ನು ನಾವು ಮತ್ತೆ ಹೇಳಬೇಕಿಲ್ಲ ಎಂದು ತಿರುಗೇಟು ನೀಡಿದರು.

ಹೆದರುವುದಿಲ್ಲ: ತಮ್ಮ ರಾಜೀನಾಮೆಗೆ ಆಗ್ರಹಿಸಿ ಆ.18ರಿಂದ ಹೋರಾಟ ಮಾಡುವುದಾಗಿ ಯಡಿಯೂರಪ್ಪ ನೀಡಿರು ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಂತಹ ಹತ್ತು ಜನ ಬಂದರೂ ನಾನು ಹೆದರುವುದಿಲ್ಲ ಎಂದರು. ಈ ಹಿಂದೆ ಐಟಿ ದಾಳಿಗೆ ಒಳಗಾಗಿದ್ದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವರಾಗಿದ್ದ ಸಿದ್ದೇಶ್ವರ ಅವರ ಮನೆಯ ಮುಂದೆ ಬಿಜೆಪಿಯವರು ಪ್ರತಿಭಟಿಸುತ್ತಾರೆಯೇ ಎಂದು ಸವಾಲು ಹಾಕಿದರು.
 

Trending videos

Back to Top