ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ: 6 ಸಾವು
Team Udayavani, Oct 2, 2017, 8:18 AM IST
ಹಾವೇರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ, ಸ್ಥಳದಲ್ಲೇ ಮಹಿಳೆಯರು ಸೇರಿ 6 ಮಂದಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಬಳಿ ಸೋಮವಾರ ನಸುಕಿನ ಜಾವ ನಡೆದಿದೆ.
ನಾಗರಾಜ ಪೂಜಾರ(24), ನಾಗಮ್ಮ(35), ಗೌರಮ್ಮ(38), ಪೂರ್ಣಿಮಾ(21), ಗಂಗಮ್ಮ(37), ನಾಗಮ್ಮ(39) ಸಾವನ್ನಪ್ಪಿದವರೆಂದು ಗುರುತಿಸಲಾಗಿದೆ. ಹುಟ್ಟುಹಬ್ಬದ ಆಚರಣೆಗಾಗಿ ಸಿಗಂಧೂರಿಗೆ ತೆರಳಿದ್ದವರು ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವವಿಸಸಿದೆ ಎಂದು ತಿಳಿದು ಬಂದದಿದೆ.
ಮೃತರು ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣ, ಮಾಕನೂರು ಮತ್ತು ಕೋಡಿಯಾಲ ಗ್ರಾಮಸ್ಥರು ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ರಾಣಿಬೆನ್ನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.