“ಹರಿವರಾಸನಂ’ಹಾಡಿನ ಸಾಹಿತ್ಯ ಬದಲಿಗೆ ಸಿದ್ಧತೆ

Team Udayavani, Nov 20, 2017, 9:10 AM IST

103.jpg

ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಜೋಗುಳದ ಹಾಡು “ಹರಿವ ರಾಸನಂ’ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ. ಹಾಡಿನ ಮೂಲ ರೂಪದಲ್ಲಿರುವ ಕೆಲವೊಂದು ಶಬ್ದಗಳು ಈಗಿನ ಹಾಡಿನಲ್ಲಿ ಇಲ್ಲ. ಜತೆಗೆ ಕೆಲ ಶಬ್ದಗಳು ತಪ್ಪಾಗಿ ಉಚ್ಚಾ ರಣೆ ಯಾಗಿ ರು ವುದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಸದ್ಯ ಇರುವ ಹಾಡನ್ನು ಹಾಡಿದ್ದು ಡಾ| ಕೆ.ಜೆ.ಯೇಸುದಾಸ್‌ ಮತ್ತು ರಾಗ ಸಂಯೋ ಜನೆ ಮಾಡಿದ್ದು ದಿ| ಜಿ. ದೇವರಾಜನ್‌. ಹಿಂದೊಮ್ಮೆ ಯೇಸು ದಾಸ್‌ ಅವರೇ ಸಾಹಿತ್ಯದಲ್ಲಿ ಬದಲಾ ಗಬೇಕು ಎಂದು ಸಲಹೆ ನೀಡಿದ್ದರು. ಜತೆಗೆ “ಅರಿವಿಮ ರ್ದನಂ’ ಎಂಬ ಪದವನ್ನು ಹಾಡುವ ವೇಳೆ ಪ್ರತ್ಯೇಕವಾಗಿ ಉಚ್ಚರಿ ಸಬೇಕು ಎಂದು ಹೇಳಿ ದ್ದರು. ಜನಪ್ರಿಯ ಗಾಯಕ 1975ರಲ್ಲಿ ತೆರೆ ಕಂಡಿದ್ದ “ಸ್ವಾಮಿ ಅಯ್ಯಪ್ಪನ್‌’ ಸಿನಿಮಾದಲ್ಲಿ ಈ ಹಾಡನ್ನು ಹಾಡಿದ್ದರು. ಸದ್ಯ ಯೇಸುದಾಸ್‌ ಅಮೆ ರಿಕ ಪ್ರವಾಸದಲ್ಲಿದ್ದಾರೆ. ಮಾಸಾಂತ್ಯಕ್ಕೆ ಕೇರ ಳಕ್ಕೆ ಬರಲಿದ್ದು, ಆಗ ಹಾಡನ್ನು ಮತ್ತೂಮ್ಮೆ ರೆಕಾರ್ಡ್‌ ಮಾಡುವ ಬಗ್ಗೆ ಅವರ ಜತೆ ಚರ್ಚಿಸಬಹುದು ಎಂದು ಟಿಡಿಬಿಯ ಹೊಸ ಅಧ್ಯಕ್ಷ ಎ.ಪದ್ಮಕುಮಾರ್‌ ತಿಳಿಸಿದ್ದಾರೆ.  

1920ರಲ್ಲಿಯೇ ಹಾಲಿ ಇರುವ ಹಾಡು ರಚನೆಯಾಗಿತ್ತು ಎಂದು ನಂಬಲಾಗಿದೆ. ಸಂಗೀತಕ್ಕೆ ಅಳವಡಿಸುವ ವೇಳೆ ಕೆಲ ಅಂಶಗಳನ್ನು ಕೈಬಿಟ್ಟಿರಬಹುದು. ಕೊನ್ನಾ ಕತ್ತು ಜಾನಕಿ ಅಮ್ಮ ಎಂಬುವರು ಈ ಹಾಡು ರಚಿಸಿದ್ದಾರೆ ಎಂದು ಹೇಳಲಾ ಗುತ್ತಿದೆ. ಇದುವರೆಗಿನ ದಾಖಲೆ ಪ್ರಕಾರ ಕಂಬ ಕುಡಿ ಕುಲತ್ತೂರ್‌ ಶ್ರೀನಿವಾಸ ಅಯ್ಯರ್‌ “ಹರಿವರಾಸನಂ’ ಹಾಡು ಬರೆದ ಬಗ್ಗೆ ಲಿಖೀತ ದಾಖಲೆಗಳೇ ಇವೆ. 

ಅಯ್ಯಪ್ಪನ ಸ್ಟಾಂಪ್‌ಮೇಲೆ ಫೋಟೋ
ಅಂಚೆ ಇಲಾಖೆಯ ಐದು ರೂ.ಗಳ ಸ್ಟಾಂಪ್‌ನಲ್ಲಿ ಫೋಟೋ ಬರಬೇಕೆ? ಹಾಗಿದ್ದರೆ ನೀವು ಶಬರಿಮಲೆ ದೇಗುಲದ ಅಂಚೆ ಕಚೇರಿಗೆ ಬರಬೇಕು. ಹಾಲಿ ಸಾಲಿನಲ್ಲಿ ದೇಗುಲ ತೆರೆಯುತ್ತಿದ್ದಂತೆ ಅಂದರೆ ನ.16ರಿಂದಲೇ ಈ ವ್ಯವಸ್ಥೆ ಆರಂಭಿಸಲಾಗಿದೆ. 

ಒಂದು ಸೆಟ್‌ ಅಂದರೆ 12 ಫೋಟೋಗಳು ಬರುತ್ತವೆ. ಸ್ಟಾಂಪ್‌ಗೆ 5 ರೂ. ಆದರೂ, ಫೋಟೋ ತೆಗೆ ಯು  ವುದು, ಪ್ರಿಂಟಿಂಗ್‌ ಸೇರಿ ಒಟ್ಟು ವೆಚ್ಚ 300 ರೂ. ಆಗುತ್ತದೆ ಎಂದು ಅಂಚೆ ಕಚೇರಿಯ ಅಧಿಕಾರಿ ಅನಿಲ್‌ಕುಮಾರ್‌ ತಿಳಿಸಿದ್ದಾರೆ. ಅವರ ಪ್ರಕಾರ ಹೆಚ್ಚಿನವರಿಗೆ ಈ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲ. ಸದ್ಯ ದಿನಕ್ಕೆ 50 ಮಂದಿ ಭೇಟಿ ನೀಡುತ್ತಿದ್ದಾರೆ. ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿಕೊ ಡಬೇಕು. ಈ ಪ್ರಕ್ರಿಯೆ ಮುಕ್ತಾಯಕ್ಕೆ 10 ನಿಮಿಷ ಬೇಕು ಎಂದವರು ಹೇಳಿದ್ದಾರೆ. ಈ ಅಂಚೇ ಕಚೇರಿ ದೇಗುಲ ತೆರೆದ ಸಂದ ರ್ಭಗಳಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತದೆ.

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.