ರಾಹುಲ್‌ಗೆ ವ್ಯಂಗ್ಯದ ಬೀಳ್ಕೊಡುಗೆ ನೀಡಿದ ಬಿಎಸ್‌ವೈ | Udayavani - ಉದಯವಾಣಿ
   CONNECT WITH US  
echo "sudina logo";

ರಾಹುಲ್‌ಗೆ ವ್ಯಂಗ್ಯದ ಬೀಳ್ಕೊಡುಗೆ ನೀಡಿದ ಬಿಎಸ್‌ವೈ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗಿನಿಂದ ಟ್ವಿಟರ್‌ ಮೂಲಕ ವ್ಯಂಗ್ಯದ ಮಾತುಗಳಿಂದ ತಿವಿಯುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇದೀಗ ಅದೇ ವ್ಯಂಗ್ಯದ ಮೂಲಕ ಅವರನ್ನು ರಾಜ್ಯದಿಂದ ಬೀಳ್ಕೊಟ್ಟಿದ್ದಾರೆ.

ರಾಜ್ಯ ಪ್ರವಾಸ ಮುಗಿಸಿ ರಾಹುಲ್‌ ದೆಹಲಿಗೆ ಹಿಂತಿರುಗುತ್ತಿದ್ದಂತೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಆತ್ಮೀಯ ಚುನಾವಣಾ ಹಿಂದೂ ರಾಹುಲ್‌ ಗಾಂಧಿಯವರೇ, ಜನಾಶೀರ್ವಾದ ಯಾತ್ರೆ ಹೆಸರಲ್ಲಿ ನಿಮ್ಮ ಚುನಾವಣಾ ವಿಹಾರ ಯಾತ್ರೆ ನಮ್ಮ ಪಾಲಿಗೆ ಅದೃಷ್ಟ ತಂದಿದೆ. ನಿಮ್ಮ ಈ ಭೇಟಿಯಿಂದ ನಾವು ಅತಿ ಹೆಚ್ಚು ಲಾಭ ಪಡೆದುಕೊಂಡಿದ್ದೇವೆ. ಆದರೂ ಮುಂದಿನ ಬಾರಿ ನೀವು ಬರುವಾಗ ದಯವಿಟ್ಟು ನಿಮ್ಮ ಭಾಷಣಗಳಲ್ಲಿ ಹೊಸತನ ಅಳವಡಿಸಿಕೊಳ್ಳಿ. ಗುಜರಾತ್‌ ಮತ್ತು ಉತ್ತರಪ್ರದೇಶ ಮಾದರಿಯಿಂದ ಹೊರಬನ್ನಿ ಎಂದು ಸಲಹೆ ಮಾಡಿದ್ದಾರೆ.

Trending videos

Back to Top