ಮೊಬೈಲ್‌ ಕರೆಗಳಿಂದ ಬೇಸತ್ತ ಕೇರಳದ ವರ | Udayavani - ಉದಯವಾಣಿ
   CONNECT WITH US  
echo "sudina logo";

ಮೊಬೈಲ್‌ ಕರೆಗಳಿಂದ ಬೇಸತ್ತ ಕೇರಳದ ವರ

ನೆಂಟರಿಷ್ಟರಿಗೆ ಮದುವೆಯ ಆಮಂತ್ರಣ ಪತ್ರ ಹಂಚಿ ಆದ ಬಳಿಕ ಅವರು ವಧು ಅಥವಾ ವರನಿಗೆ ಯಾವ ಕಾರಣಕ್ಕೆ ಫೋನ್‌ ಕರೆ ಮಾಡಬಹುದು? ಅಭಿನಂದನೆ ಹೇಳಲು ಅಥವಾ ವಿಳಾಸ ಖಚಿತಪಡಿಸಿಕೊಳ್ಳಲು ಕರೆ ಮಾಡುತ್ತಾರೆ. ಆದರೆ ಕೇರಳದ ಕಲ್ಲಿಕೋಟೆಯ ವರ ವಿಭೀಶ್‌ ಆಮಂತ್ರಣ ಪತ್ರಿಕೆ ಹಂಚಿದ ಬಳಿಕ ಬರುತ್ತಿರುವ ಫೋನ್‌ ಕರೆಗಳಿಂದ ರೋಸಿ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಹಾಗೆ ಈ ಕರೆಗಳು ಯಾಕಾಗಿ ಬರುತ್ತವೆ ಗೊತ್ತಾ? ವಧುವಿನ ವಿಚಿತ್ರ ಹೆಸರಿನ ಅರ್ಥ ತಿಳಿದುಕೊಳ್ಳಲು. ಪತ್ರಿಕೆಯಲ್ಲಿ ವಧುವಿನ ಹೆಸರು "ಧ್ಯಾನೂ ರ್ಹನಾಗಿತಿ'(dhyanoo rhagithy) ಎಂದಿದೆ. ಆದರೆ ಇಷ್ಟೆಲ್ಲಾ ಎಡವಟ್ಟುಗಳಿಗೆ ಕಾರಣ ವಿಭೀಶ್‌ ಅವರೇ.

ಆಮಂತ್ರಣ ಪತ್ರಿಕೆ ಮೇಲೆ "ವಧುವಿನ ಹೆಸರನ್ನು ಸರಿಯಾಗಿ ಉಚ್ಚರಿಸಿದವರಿಗೆ ಮಾತ್ರ ಮದುವೆಗೆ ಆಮಂತ್ರಣ' ಎಂದು ಬರೆಯಲಾಗಿತ್ತು. ಅದನ್ನು ಅವರು ನೆಂಟರಿಷ್ಟರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿದ್ದರು. ಇದು ಕೇರಳದಾದ್ಯಂತ ವೈರಲ್‌ ಆಗಿ, ಪತ್ರಿಕೆ ಮೇಲೆ ಅಚ್ಚು ಮಾಡಲಾಗಿದ್ದ ಅವರ ಮತ್ತು ಅವರ ತಂದೆಯ ಮೊಬೈಲ್‌ಗೆ 3 ದಿನಗಳಿಂದ ಪುರುಸೊತ್ತಿಲ್ಲದಂತೆ ಕರೆಗಳು ಬರುತ್ತಿವೆ.

ಇಂದು ಹೆಚ್ಚು ಓದಿದ್ದು

ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ಪ್ರತಿಭಾ ಪುರಸ್ಕಾರ'ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

Aug 20, 2018 06:00am

Trending videos

Back to Top