CONNECT WITH US  

ಬಿಎಸ್‌ವೈ ಹರಕೆ ಕುರಿ ಮಾಡಿದ್ದು ಬಿಜೆಪಿ

ಗಜೇಂದ್ರಗಡ: "ಬಿ.ಎಸ್‌.ಯಡಿಯೂರಪ್ಪ ಅವರು ಇನ್ನೆಂದೂ ಮುಖ್ಯಮಂತ್ರಿಯಾಗದಂತೆ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರು ಹರಕೆ ಕುರಿಯನ್ನಾಗಿ ಮಾಡಿದ್ದಾರೆ ಹೊರತು ಕಾಂಗ್ರೆಸ್‌-ಜೆಡಿಎಸ್‌ ಪಕ್ಷದವರಲ್ಲ ' ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ.ಎಸ್‌.ಯಡಿಯೂರಪ್ಪ ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ದೇಶದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ವ್ಯಕ್ತಿ ಯಾರೆಂದರೆ ಯಡಿಯೂರಪ್ಪನವರು ಎಂದು ಡಿ.ವಿ ಸದಾನಂದಗೌಡರು ಹೇಳಿದ್ದರು.

ಯಡಿಯೂರಪ್ಪನವರಿಗೆ ಅನ್ಯಾಯವಾಗಿದ್ದರೆ ಅದಕ್ಕೆ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರೇ
ಕಾರಣ ಹೊರತು ಬೇರ್ಯಾವ ಪಕ್ಷವೂ ಅಲ್ಲ' ಎಂದರು.


Trending videos

Back to Top