CONNECT WITH US  

ಯುದ್ಧ ವಿಮಾನ ಪೈಲೆಟ್‌ ಆಗಿ ಶಿವಕುಮಾರ ಆಯ್ಕೆ

ಕುಮಟಾ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ನಿವಾಸಿ, ನಿವೃತ್ತ ಸೈನಿಕ ಶಾಂತಾರಾಮ ಹಾಗೂ
ಜ್ಯೋತಿ ಭಟ್ಟ ಕೆರೆಯವರ ಪುತ್ರ ಶಿವಕುಮಾರ ಭಟ್ಟ ಕೆರೆ ಭಾರತೀಯ ವಾಯುದಳ ಯುದ್ಧ ವಿಮಾನದ ಪೈಲೆಟ್‌ ಆಗಿ
ಆಯ್ಕೆಯಾಗಿದ್ದಾರೆ. 

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಗೆ 2014ರ ಯುಪಿಎಸ್‌ಸಿ ಪರೀಕ್ಷೆ ಮೂಲಕ ಆಯ್ಕೆಯಾಗಿದ್ದ ಅವರು,ವಾಯುಯಾನ ವಿಭಾಗದಲ್ಲಿ ಮೂರು ವರ್ಷ ಕಠಿಣ ತಾಂತ್ರಿಕ ತರಬೇತಿ ಪೂರೈಸಿದ್ದರು.

ಬಳಿಕ ಹೈದರಾಬಾದ್‌ನ ವಾಯುದಳದ ಅಕಾಡೆಮಿಯಲ್ಲಿ ಒಂದು ವರ್ಷ ವಿಮಾನ ಚಾಲನೆ ತರಬೇತಿ ಪೂರ್ಣಗೊಳಿಸಿ
ವಾಯಸೇನೆಯಲ್ಲಿ ಯುದ್ಧ ವಿಮಾನವೊಂದರ ಪೈಲೆಟ್‌ ಆಗಿ ನೇಮಕಗೊಂಡಿದ್ದಾರೆ. ರಾಜ್ಯದ ಬೀದರ್‌ನಲ್ಲಿರುವ
ವಾಯುಸೇನೆ ನೆಲೆಯಲ್ಲಿ ಜು.1ರಿಂದ ಯುದ್ಧ ವಿಮಾನಗಳ ಕುರಿತ ವಿಶೇಷ ತರಬೇತಿ ಪಡೆಯಲಿದ್ದಾರೆ.

Trending videos

Back to Top