CONNECT WITH US  

ಶಾಲೆಗೆ ಗುಣಮಟ್ಟ ಹಾಕಿದ ಸರ್ಕಾರ

28,847 ಸಾವಿರ ಸರಕಾರ ಶಾಲೆಗಳಿಗೆ ಬೀಗ‌, 1 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳ ವಿಲೀನ

ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಕಾರ್ಯಕ್ರಮಗಳನ್ನು ನೀಡಲಾಗಿದೆಯಾದರೂ ಶಿಕ್ಷಣ ಗುಣಮಟ್ಟ ಸುಧಾರಣೆ ಹೆಸರಿನಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇರುವುದು ಆತಂಕಕಾರಿ ವಿಚಾರ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ರಾಜ್ಯದ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಸಮೀಪದ 8,530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. 

1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ, ಅನು ದಾನಿತ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನ ಗೊಳಿಸಲಾಗುತ್ತದೆ ಎಂದು ಹೇಳಿರುವುದ ರಿಂದ ವಿಲೀನ ಪ್ರಕ್ರಿಯೆ ನಂತರ ಮಕ್ಕಳಿಲ್ಲದ ಶಾಲೆ ಗಳನ್ನು ಸ್ವಾಭಾವಿಕವಾಗಿ ಮುಚ್ಚಲೇ ಬೇಕಾಗಬಹುದು.  ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ ವಿಶೇಷ ಪ್ಯಾಕೇಜ್‌ ಮೂಲಕ ಬಜೆಟ್‌ನಲ್ಲಿ 150 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ರಾಜ್ಯ ತರಬೇತಿ ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಿ, ತರಬೇತಿ ಕೇಂದ್ರಗಳ ಬಲವರ್ಧನೆಗೆ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ತರಗತಿಗಳ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಸಕ್ತ ಸಾಲಿನಿಂದ ಆರಂಭಿಸಲಾಗುತ್ತದೆ. ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳನ್ನು ಆಕರ್ಷಿಸಲು ಈ ಘೋಷಣೆ ಮಾಡಲಾಗಿದೆ. ಪ್ರಾಯೋಗಿಕವಾಗಿ 1000 ಶಾಲೆ ಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯಲಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಅಂಗನವಾಡಿ ಕೇಂದ್ರಗಳನ್ನು 4100 ಸರ್ಕಾರಿ ಪ್ರಾಥಮಿಕ ಶಾಲಾವರಣಕ್ಕೆ ಸ್ಥಳಾಂತರಿಸಿ "ಬಾಲಸ್ನೇಹಿ' ಕೇಂದ್ರವಾಗಿ ಬಲವರ್ಧನೆ ಮಾಡಲಾಗುತ್ತದೆ. ಕಾರ್ಯಸಾಧ್ಯತೆ ಅನುಸಾರ ಹಂತಹಂತವಾಗಿ ಉಳಿದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲಾಗುತ್ತದೆ.

ವೈದ್ಯಕೀಯ ಸಹಾಯವಾಣಿ ಸೇವೆ ವಿಸ್ತರಣೆಗೆ ನಿರ್ಧಾರ 
ಪ್ರಸ್ತುತ ಜಾರಿಯಲ್ಲಿರುವ ಕರೆ ಸಂಖ್ಯೆ 108 ಮತ್ತು 104 ರಲ್ಲಿ ಲಭ್ಯವಿರುವ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ವೈದ್ಯಕೀಯ ಸಹಾಯವಾಣಿ ಸೇವೆ ಗಳ ವ್ಯಾಪ್ತಿ ವಿಸ್ತರಿಸಲು ಸರ್ಕಾರ ನಿರ್ಧರಿ ಸಿದೆ. ಇವುಗಳ ಲಭ್ಯತೆ ಮತ್ತು ಗುಣಮಟ್ಟ ಹೆಚ್ಚಿಸಲು ಅನುಕೂಲವಾ ಗುವಂತೆ ಸೇವೆ ಗಳನ್ನು ಪುನರ್‌ ರಚಿಸಲಾಗುತ್ತದೆ. ತಾಯಿ ಮತ್ತು ಮಕ್ಕಳ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಸೇರಿಸಲಾಗುತ್ತದೆ. ಇದರಿಂದಾಗಿ ಎಲ್ಲರಿಗೂ ಸಹಾಯವಾಣಿ ಸೇವೆ ಸುಲಭ ಲಭ್ಯವಾಗಲಿದೆ.

ಶಾಲೆಗಳಲ್ಲಿ ಬಯೊಮೆಟ್ರಿಕ್‌ 
ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಯ ಮೇಲೆ ನಿಗಾವಹಿಸಲು ಬಯೊ ಮೆಟ್ರಿಕ್‌ ಯಂತ್ರ ಅಳವಡಿ ಸ ಲಾ ಗುವುದು. ಈ ಯೋಜನೆ ಮುಂದಿನ 3 ವರ್ಷಗಳಲ್ಲಿ ಜಾರಿ ಮಾಡಲಾಗುತ್ತದೆ ಮತ್ತು ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂ. ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹೊಸ ವಿಶ್ವವಿದ್ಯಾಲಯಗಳ ಉದಯಕಾಲ ಶುರು
ಕೌಶಲ್ಯ ಬುನಾದಿಯಡಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿರುವ ಸರ್ಕಾರ, ತುಮಕೂರು ಜಿಲ್ಲೆಯಲ್ಲಿ ಕ್ರೀಡೆ ಮತ್ತು ಅಂಗಸಾಧನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯವನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಯೋಜಿಸಿದೆ. 

ಹಾಗೆಯೇ ಕ್ರೀಡೆ ಮತ್ತು ಅಂಗಸಾಧನೆಗಳಿಗೆ ಬೇಕಾದ ಉಪಕರಣ ಮತ್ತು ಇತರೆ ವಸ್ತುಗಳ ತಯಾರಿಸುವ ಕ್ಲಸ್ಟರ್‌ ಕೂಡ ಅದೇ ಜಿಲ್ಲೆಯಲ್ಲಿ ತೆರೆಯಲಿದೆ. ಈ ಕಾರ್ಯಕ್ಕಾಗಿ 3 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಸರ್ಕಾರಿ ನೇಮಕ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸೇವೆ ಒದಗಿಸುವ ಭದ್ರತಾ ಸಿಬ್ಬಂದಿಗೆ ತರಬೇತಿ ಅಗತ್ಯವಾಗಿದೆ. ಇದಕ್ಕಾಗಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯವನ್ನು  ಖಾಸಗಿ ಸಹಭಾಗಿತ್ವದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸಲು ಮೂರು ಕೋಟಿ ಮೀಸಲಿಡಲಾಗಿದೆ.

ಪದವಿ, ಪದವಿಪೂರ್ವ ತರಗತಿಯಲ್ಲಿ ಓದುತ್ತಿರುವ ಎಸ್ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ತರಬೇತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾಹಿತಿ ಸಂವಹನ ತಂತ್ರಜ್ಞಾನ ಬಳಸಿ ನೀಡಲಾಗುತ್ತದೆ.

ಶಾಲಾ ಕಾಲೇಜು ಅನುದಾನಕ್ಕೆ ಪೋರ್ಟಲ್‌ : ಶಾಲಾ ಕಾಲೇಜು ಉನ್ನತೀಕರಣಕ್ಕಾಗಿ ಹಳೆ ವಿದ್ಯಾರ್ಥಿಗಳ ಬಾಂಧವ್ಯ ಹೆಚ್ಚಿಸಲು ಹೊಸ ಪೋರ್ಟಲ್‌ ತೆರೆಯಲಾಗುತ್ತದೆ. ಈ ಪೋರ್ಟಲ್‌ ಮೂಲಕ ಹಳೆ ವಿದ್ಯಾರ್ಥಿಗಳು ಅನುದಾನ ನೀಡಬಹುದು. ಇದು ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಜೊತೆಗಿನ ಬಾಂಧವ್ಯ ವೃದ್ಧಿ ಮಾಡಿಕೊಳ್ಳಬಹುದು. ಸಿಎಸ್‌ಆರ್‌ ಕಾರ್ಯಕ್ರಮದ ಪ್ರಾಜೆಕ್ಟ್ ವಿವರವೂ ಇದರಲ್ಲಿ ಸಿಗಲಿದೆ. ಇದಕ್ಕಾಗಿ ಮೂರು ಕೋಟಿ ರೂ. ಒದಗಿಸಲಾಗುತ್ತದೆ. ರಾಜ್ಯದ ಸರ್ಕಾರಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಮೂಲಕ 250 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.


Trending videos

Back to Top