CONNECT WITH US  

ಅಕ್ಕ ಸಮ್ಮೇಳನಕ್ಕೆ ಆಹ್ವಾನ

ಬೆಂಗಳೂರು: ಅಮೇರಿಕಾದ ಡಲ್ಲಾಸ್‌ನಲ್ಲಿ ಅಕ್ಟೋಬರ್‌ 31 ರಿಂದ ಸೆಪ್ಟೆಂಬರ್‌ 2 ರ ವರೆಗೆ ನಡೆಯುವ 10ನೇ ಅಕ್ಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಸಂಘಟನಾಕಾರರು ಆಹ್ವಾನಿಸಿದ್ದಾರೆ. 

ಅಕ್ಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಮರನಾಥ ಗೌಡ ಹಾಗೂ ಹಾಲಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಇದೇ ವೇಳೆ, ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಾರಿಯ ಸಮ್ಮೇಳನಕ್ಕೆ ವಿಶೇಷ ಅತಿಥಿಗಳಾಗಿ ನಟರಾದ ಪುನೀತ್‌  ರಾಜ್‌ಕುಮಾರ್‌,ರಕ್ಷಿತ್‌ ಶೆಟ್ಟಿ, ಅನಂತನಾಗ್‌, ಭಾರತರತ್ನ ಸಿಎನ್‌ಆರ್‌ ರಾವ್‌, ಯದುವೀರ್‌ ಒಡೆಯರ್‌ರನ್ನು ಆಹ್ವಾನಿಸಿದ್ದಾರೆ.

Trending videos

Back to Top