CONNECT WITH US  

ವರ್ಗಾವಣೆ ದಂಧೆಗೆ ಬಿಎಸ್‌ವೈ ದಾಖಲೆ ಕೊಡಲಿ

ಬೆಂಗಳೂರು: ವಿಧಾನಸೌಧದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಸೂಕ್ತ ದಾಖಲೆ ಕೊಡಲಿ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ಯಾವುದೇ ಹಣ ಪಡೆದು ವರ್ಗಾವಣೆ ನಡೆಸಿಲ್ಲ. ಎಲ್ಲವೂ ಕಾನೂನು ಬದಟಛಿವಾಗಿಯೇ ವರ್ಗಾವಣೆ ಮಾಡಲಾಗಿದೆ.

ಯಡಿಯೂರಪ್ಪ ಬಳಿ ದಾಖಲೆ ಇದ್ದರೆ ನೀಡಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಉತ್ತರ ಕರ್ನಾಟಕ
ಭಾಗದ ಯಾವ ಜಿಲ್ಲೆಗೆ, ತಾಲೂಕಿಗೆ ಅನ್ಯಾಯವಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಲಿ. ಸರ್ಕಾರ ಅದನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಇದರಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ನಾನು ಕೇವಲ ಜೆಡಿಎಸ್‌, ಕಾಂಗ್ರೆಸ್‌ಗೆ ಸಚಿವನಲ್ಲ ಎಲ್ಲ ಜನರ ಮಂತ್ರಿ. ಜನರು ನಮಗೆ ಮತ ಹಾಕಿಲ್ಲ ಎಂದು ಸುಮ್ಮನಿರಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಮಗ ತಪ್ಪು ಮಾಡಿದರೆ ತನಿಖೆಯಾಗಲಿ: ನನ್ನ ಮಗ ಯಾರ ಮೇಲೂ ಹಲ್ಲೆ ಮಾಡಿಲ್ಲ. ಕೆಲವರು ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಆತ ಎಲ್ಲಿಯೂ ಹೇಳಿಲ್ಲ. ಈ ಸಂಬಂಧ ಇನ್ಸ್‌ಪೆಕ್ಟರ್‌ ಅಮಾನತು ಮಾಡುವುದರಿಂದ ನನಗೇನು ಆಗುವುದಿದೆ. ನನ್ನ ಮಗ ತಪ್ಪು ಮಾಡಿದರೆ ತನಿಖೆ ನಡೆಸಲಿ. ನಾನು ಇದುವರೆಗೂ ಯಾರನ್ನೂ ವರ್ಗ ಮಾಡಿಲ್ಲ. ನನಗೆ ಯಾರ ಮೇಲೂ ದ್ವೇಷ ಇಲ್ಲ ಎಂದು ರೇವಣ್ಣ ಹೇಳಿದರು.

Trending videos

Back to Top