CONNECT WITH US  

ರಾಜಕೀಯ ಕಾರಣಕ್ಕೆ ವಿವಾದ: ವಿಷಾದ

ಸಾಂದರ್ಭಿಕ ಚಿತ್ರ.

ಮಡಿಕೇರಿ:  ಸೈನಿಕರ ಜಿಲ್ಲೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭೇಟಿ ನೀಡಿದ್ದ ಸಂದರ್ಭ ಅವಮಾನವಾಗುವ ಘಟನೆಗಳು ನಡೆದಿದ್ದು, ರಾಜಕೀಯ ಕಾರಣಕ್ಕಾಗಿ ಈ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ ಎಂದು ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ-ಜನರಲ್‌ ತಿಮ್ಮಯ್ಯ ಫೋರಂ ವಿಷಾದ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕ ನಿವೃತ್ತ ಮೇಜರ್‌ ಬಿ.ಎ.ನಂಜಪ್ಪ ಹಾಗೂ ಉಳ್ಳಿಯಡ ಎಂ.ಪೂವಯ್ಯ ಕೊಡಗಿನ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಮೀಕ್ಷೆಗೆ ರಕ್ಷಣಾ ಸಚಿವರು ಬಂದಿದ್ದಾಗ ವಿನಾಕಾರಣ ವಿವಾದ ಹುಟ್ಟಿಕೊಂಡಿದ್ದು, ಇದರಲ್ಲಿ ರಕ್ಷಣಾ ಸಚಿವರ ತಪ್ಪಿಲ್ಲವೆಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರವೂ ಇದರಲ್ಲಿ ಇಲ್ಲವೆಂದು ಸಮರ್ಥಿಸಿಕೊಂಡ ಅವರು, ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಉಸ್ತುವಾರಿ ಸಚಿವರ ಹಾದಿ ತಪ್ಪಿಸಿದ್ದಾರೆಂದು ಟೀಕಿಸಿದರು.  ರಕ್ಷಣಾ ಸಚಿವರು ಅಂದು ತೆಗೆದುಕೊಂಡ ನಿಲುವನ್ನು ಕೊಡಗಿನ ಮಾಜಿ ಸೈನಿಕರ ಸಂಘ ಮತ್ತು ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಫೋರಂ ಬೆಂಬಲಿಸಲಿದೆ. ಸಚಿವರು, ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ವಿವಾದ ಕೇವಲ ಕಾಲ್ಪನಿಕ ಮತ್ತು ರಾಜಕೀಯ ಪ್ರೇರಿತ ಎಂದು ಮೇಜರ್‌ ಬಿ.ಎ.ನಂಜಪ್ಪ ಆರೋಪಿಸಿದರು.


Trending videos

Back to Top