CONNECT WITH US  

ಬಿಎಸ್‌ವೈಗೆ ಮಾನ ಇದೆಯಾ?:ಎಚ್‌ಡಿಕೆ

ರಾಮನಗರ: "ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಏನು ನಷ್ಟ ಆಗಿದೆಯೋ (ಮಾನನಷ್ಟ ಮೊಕದ್ದಮೆ)ಅದರ ಮೇಲೆ ಕೇಸು ಹಾಕಿಕೊಳ್ಳಲಿ, ನನಗೇನೂ ಚಿಂತೆಯಿಲ್ಲ. ನೀವು ಅದೆಂತಧ್ದೋ ಹೇಳಿದರಲ್ಲ (ಮಾನ), ಅದು ಅವರಿಗೆ ಇದೆಯಾ' ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮಾಜಿ ಸಿಎಂ ಯಡಿಯೂರಪ್ಪ ನಿಮ್ಮ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರ ಪ್ರಸ್ತಾಪಿಸಿದ್ದಾರೆ ಎಂದಾಗ, "ಅದು ಅವರಿಗೆ ಇದೆಯಾ?' ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ಏನು ನಷ್ಟ ಆಗಿದೆಯೋ ಅದರ ಮೇಲೆ ಕೇಸು ಹಾಕಿಕೊಳ್ಳಲಿ. ಅದನ್ನು ಎದುರಿಸುವ ಶಕ್ತಿ ನನಗಿದೆ. ನಾನು ದಾಖಲೆ ಇಲ್ಲದೆ ಮಾತನಾಡುವುದಿಲ್ಲ. ಪಲಾಯನವಾದ ಮಾಡಲ್ಲ.ಸೂಕ್ತ ಸಮಯದಲ್ಲಿ ಅವರೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ ಎಂದರು.


Trending videos

Back to Top