CONNECT WITH US  

ಪ್ರೊಫೈಲಲ್ಲಿ ಪಾಕ್‌ಧ್ವಜ ಹಾಕಿಕೊಂಡಿದ್ದವನ ಸೆರೆ

ಸಾಂದರ್ಭಿಕ ಚಿತ್ರ.

ಮಸ್ಕಿ: ಪಟ್ಟಣದ ಯುವಕನೊಬ್ಬ ತನ್ನ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಪಾಕಿಸ್ತಾನ ಧ್ವಜವಿರುವ ಚಿತ್ರದೊಂದಿಗೆ ತನ್ನ
ಫೋಟೋ ಹಾಕಿದ್ದಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹ್ಮದ್‌ ರಫಿ ಸಿಕ್ಕಲಗಾರ್‌ (20) ಬಂಧಿತ.

ಶನಿವಾರ ರಾತ್ರಿ ತನ್ನ ಫೇಸ್‌ಬುಕ್‌ ಅಕೌಂಟ್‌ನ ಪ್ರೊಫೈಲ್‌ಗೆ ತನ್ನ ಭಾವಚಿತ್ರ ಹಾಗೂ ಹ್ಯಾಪಿ ಇಂಡಿಪೆಂಡೆನ್ಸ್‌ ಡೇ ಪಾಕಿಸ್ತಾನ್‌ ಆ.14'ಎಂಬ ಪೋಸ್ಟ್‌ ಅಪ್‌ಲೋಡ್‌ ಮಾಡಿ ಹರಿಬಿಟ್ಟಿದ್ದಾನೆ. ಜನತೆಯ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಮತ್ತು ಪ್ರಚೋದನಾತ್ಮಕ ಕೃತ್ಯವೆಸಗಿ ಸಾಮಾಜಿಕ ಶಾಂತಿ, ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

Trending videos

Back to Top