ಅರಬ್ಬರ ನಾಡಿನಲ್ಲಿ ಭಗವದ್ಗೀತೆ ಬೋಧನೆ

Team Udayavani, Oct 29, 2018, 6:00 AM IST

z-13.jpg

ಬೆಂಗಳೂರು: ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಧರ್ಮ ಬೋಧನೆ ಮಾಡಿರುವ ಹಿಂದೂಗಳ ಧರ್ಮಗ್ರಂಥ “ಭಗವದ್ಗೀತೆ’ಯ ಪಠಣ ಈಗ ಅರಬ್ಬರ ನಾಡಿ ನಲ್ಲಿಯೂ ಆರಂಭವಾಗಿದೆ. ಮಹಾಭಾರತದ ಯುದ್ಧದ ಆರಂಭಕ್ಕೂ ಮುನ್ನ ಶ್ರೀಕೃಷ್ಣ ಅರ್ಜುನನಿಗೆ ಆತ್ಮದ ಅಮರತ್ವದ ಬಗ್ಗೆ ಉಪದೇಶ ಮಾಡುತ್ತಾ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗದ ಉಪದೇಶ ಮಾಡಿರುವ ಗೀತೋಪದೇಶ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿ ಗೌರವಿಸಲ್ಪಟ್ಟಿದೆ. ಈ ಭಗವದ್ಗೀತೆಯನ್ನು ಈಗ ದುಬಾೖ ಯಲ್ಲೂ ಬೋಧಿಸಲಾಗುತ್ತಿದೆ. ಯುಎಇಯಲ್ಲಿ ವಾಸವಾಗಿರುವ ಕನ್ನಡಿಗರು, ಕನ್ನಡದ ಮಕ್ಕಳಿಗಾಗಿ ಭಗವದ್ಗೀತೆಯ ಪಠಣವನ್ನು ಮನೆ ಪಾಠವಾಗಿ ಆರಂಭಿಸಿದ್ದಾರೆ.

ಇಲ್ಲಿನ ವಿವಿಧ ಸಂಘಟನೆಗಳ ಕನ್ನಡಿಗರು ಒಟ್ಟಾಗಿ ತಮ್ಮ ಮಕ್ಕಳಿಗೆ ಗೀತೋಪದೇಶ ಪಠಣ ಮಾಡಿಸಲು ನಿರ್ಧರಿದ್ದಾರೆ. ಕನ್ನಡಿಗರು ದುಬಾೖ ಸಂಘದ ಅಧ್ಯಕ್ಷ ಸದನ್‌ ದಾಸ್‌ ನೇತೃತ್ವದಲ್ಲಿ ಪದ್ಮರಾಜ್‌ ಎಕ್ಕಾರ್‌, ವಿಜಯ್‌ ಗುಜ್ಜರ್‌, ಸುಜಿತ್‌ ಶೆಟ್ಟಿ, ದಿನೇಶ್‌ ದೇವಾಡಿಗ ಸಹಿತ ಸ್ನೇಹಿತರ ತಂಡ ಇದನ್ನು ಆರಂಭಿಸಿದ್ದು, ಗುಜ್ಜರ್‌ ಮುನ್ನಡೆಸುತ್ತಿದ್ದಾರೆ.

ವಾರಕ್ಕೊಂದು ಕ್ಲಾಸ್‌
ಯುಎಇಯಲ್ಲಿನ ರಾಜ್ಯಗಳ ಕನ್ನಡಿಗರು ಅ. 26ರಂದು ಅಧಿಕೃತವಾಗಿ ಭಗವದ್ಗೀತೆ ಮನೆ ಪಾಠ ಆರಂಭಿಸಿದ್ದು, ಡಾ| ವೀಣಾ ಬನ್ನಂಜೆ ಹಾಗೂ ಚಕ್ರವರ್ತಿ ಸೂಲಿಬೆಲೆ ಭಗವದ್ಗೀತಾ ತರಗತಿಗಳನ್ನು ಉದ್ಘಾಟಿಸಿದ್ದಾರೆ. ಪ್ರತಿ ಶುಕ್ರವಾರ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ತರಗತಿ ನಡೆಸಲು ನಿರ್ಧರಿಸಲಾಗಿದೆ. ಯುಎಇಯಲ್ಲಿ ಸುಮಾರು 1.25 ಲಕ್ಷ ಕನ್ನಡಿಗರು ವಾಸವಾಗಿದ್ದು, ತಮ್ಮ ಮಕ್ಕಳಿಗೆ ಹಿಂದೂ ಧರ್ಮ ಹಾಗೂ ಗೀತೆಯ ಸಾರವನ್ನು ತಿಳಿಸುವುದರ ಜತೆಗೆ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದಾರೆ.

ಮನೆಯೇ ಪಾಠ ಶಾಲೆ
ಅರಬ್‌ ಸಂಯುಕ್ತ ರಾಷ್ಟ್ರದಲ್ಲಿ ಭಗವದ್ಗೀತೆ ಬೋಧನೆಗೆ ಪ್ರತ್ಯೇಕ ಶಾಲೆ ತೆರೆಯುವ ಬದಲು ಶಾಲೆಗೆ ಸೇರುವ ಮಕ್ಕಳ ಮನೆಯಲ್ಲೇ ಪಾಠ ಹೇಳಿಕೊಡಲು ನಿರ್ಧರಿಸಿದ್ದಾರೆ. ಪ್ರತಿವಾರವೂ ಒಬ್ಬ ವಿದ್ಯಾರ್ಥಿಯ ಮನೆಯಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ವಿಶೇಷವೆಂದರೆ ಪಾಠ ಹೇಳಿಕೊಡಲಾಗುವ ವಿದ್ಯಾರ್ಥಿ ಮನೆಯಲ್ಲೇ ಉಳಿದವರಿಗೂ ಬೆಳಗಿನ ಉಪಾಹಾರ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ತರಗತಿಗಳಿಗೆ ಕೇವಲ ಮಕ್ಕಳಷ್ಟೇ ಅಲ್ಲ, ಆಸಕ್ತಿ ಇರುವ ಯಾವುದೇ ವಯಸ್ಸಿನವರೂ ಹಾಜರಾಗಲು ಅವಕಾಶವಿದೆ.

ಉಚಿತ ಪಾಠ
ಭಗವದ್ಗೀತೆ ತರಗತಿಯ ಉದ್ಘಾಟನ ಕಾರ್ಯಕ್ರಮದ ದಿನವೇ 38 ಕುಟುಂಬದವರು ತಮ್ಮ ಮಕ್ಕಳ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ದುಬೈಯಲ್ಲೇ ಉದ್ಯೋಗಿಯಾಗಿರುವ ಸುದೇಶ್‌ ಶೆಟ್ಟಿ ಗೀತೋಪದೇಶ ಪಾಠವನ್ನು ಉಚಿತವಾಗಿ ಹೇಳಿಕೊಡಲು ಮುಂದಾಗಿದ್ದಾರೆ.

ಮಲಯಾಳಿಗಳೇ ಸ್ಫೂರ್ತಿ
ದುಬೈಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಕೇರಳಿಗರು ಈಗಾಗಲೇ ಮಲಯಾಳಿಗಳಿಗಾಗಿ ಭಗವದ್ಗೀತೆ ಪಾಠ ಹೇಳಿಕೊಡುತ್ತಿದ್ದಾರೆ. ಈ ಅಭಿಯಾನ ಯಶಸ್ಸೂ ಕಂಡಿದೆ. ಅದೇ ಮಾದರಿಯಲ್ಲೇ ಕನ್ನಡದ ಮಕ್ಕಳಿಗೂ ಗೀತೋಪದೇಶ ಮಾಡಿಸಲು ತೀರ್ಮಾನಿಸಿ, ಈ ಪ್ರಯತ್ನಕ್ಕೆ ಮುಂದಾಗಿರುವುದಾಗಿ “ಕನ್ನಡಿಗರು ದುಬಾೖ’ ಅಧ್ಯಕ್ಷ ಸದನ್‌ ದಾಸ್‌ ಹೇಳುತ್ತಾರೆ.

ಇದು ಬಹಳ ದಿನದ ಕನಸಾಗಿತ್ತು. ಈಗ ಸಾಕಾರಗೊಂಡಿದೆ. ಸ್ನೇಹಿತರೆಲ್ಲ ಸೇರಿಕೊಂಡು ನಮ್ಮ ಕನ್ನಡದ ಮಕ್ಕಳಿಗೆ ಧರ್ಮದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗೀತೆಯ ಪಾಠ ಕಲಿಯುವ ಮೂಲಕ ಮಕ್ಕಳು ತಮ್ಮ ಜೀವನ ದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲಿ ಎಂಬ ಆಶಯ ನಮ್ಮದು.
- ಸದನ್‌ ದಾಸ್‌, ಕನ್ನಡಿಗರು ದುಬಾೖ, ಅಧ್ಯಕ್ಷ

ಪ್ರತಿಯೊಬ್ಬನ ಜೀವನದಲ್ಲಿ ಉಪಯುಕ್ತವಾಗುವ ಭಗವದ್ಗೀತೆಯ ಸಾರವನ್ನು ಜನರಿಗೆ ತಿಳಿಸಲು ನಾನು ಬಯಸುತ್ತೇನೆ. ಭಗ ವದ್ಗೀತೆಯ ಬಗ್ಗೆ ಯಾರಿಗೆ ಗೊತ್ತಿಲ್ಲವೋ ಅವರಿಗೆ ಮನೆ ಪಾಠದ ಮೂಲಕ ತಿಳಿಸುವ ಪ್ರಯತ್ನ ಆರಂಭಿಸಿದ್ದೇವೆ.
-ಸುದೇಶ್‌ ಶೆಟ್ಟಿ, ಭಗವದ್ಗೀತೆ ಬೋಧಕರು

 ಶಂಕರ ಪಾಗೋಜಿ

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.