ಕೈಗೆ ಲಕ್ಷಾಂತರ ರೂ.ವಾಚು,ಧರಿಸೋದು ಚಿನ್ನ ಲೇಪಿತ ಸೂಟು


Team Udayavani, Nov 12, 2018, 6:00 AM IST

ban1211180.jpg

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಚಿನ್ನಾಭರಣ ಧರಿಸುವುದು ಬಿಡಿ, ಅದರ ಮೇಲಿದ್ದ ವ್ಯಾಮೋಹ ಎಂತವರನ್ನಾದರೂ ನಿಬ್ಬೆರಗು ಮಾಡುವಂತಿದೆ.

ಬಳ್ಳಾರಿಯಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಬಹುದೊಡ್ಡ ಬಂಗಲೆ ಕಟ್ಟಿಕೊಂಡಿರುವ ರೆಡ್ಡಿ, ಅದರ ಸುತ್ತಲು 40 ಅಡಿ ಎತ್ತರದ ಗೋಡೆ ಕಟ್ಟಿದ್ದಾರೆ. ಮನೆಯೊಳಗೆ ಹೋಗಬೇಕಾದರೆ 8ರಿಂದ 10 ಕಡೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಬಂಗಲೆಯೊಳಗೆ ಡಿಜಿಟಲ್‌ ಸ್ಕ್ರೀನ್‌ ಹೊಂದಿರುವ ಮಿನಿ ಥಿಯೇಟರ್‌, ಪ್ರತಿ ಕೊಠಡಿಗೂ ಹವಾನಿಯಂತ್ರಣ ವ್ಯವಸ್ಥೆಯ ಜತೆಗೆ ಅತ್ಯಾಧುನಿಕವಾದ ಎಲ್ಲ ಸೌಲಭ್ಯವನ್ನು ಅಲ್ಲಿ ಅಳವಡಿಸಲಾಗಿದೆ.

ಮನೆಯೊಳಗೆ ಮಿನಿ ಸಭಾಂಗಣವಿದೆ. ಇದೆಲ್ಲದಕ್ಕೂ ಮಿಗಿಲಾಗಿ ತಮ್ಮ ಖಾಸಗಿ ಕೊಠಡಿಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಲಂಕರಿಸಿಕೊಂಡಿದ್ದರು.

ಸಿಂಹಾಸನದ ಮಾದರಿಯಲ್ಲಿ 2.50 ಕೋಟಿ ರೂ.ಗಳಿಗಿಂತಲೂ ಅಧಿಕ ವೆಚ್ಚದಲ್ಲಿ ಚಿನ್ನದ ಖುರ್ಚಿ ಮಾಡಿಕೊಂಡು, ಅದರ ಮೇಲೆ ಸದಾ ಕುಳಿತುಕೊಳ್ಳುತ್ತಿದ್ದರು. ಊಟ, ತಿಂಡಿಗೆ ಚಿನ್ನ ಮತ್ತು ಬೆಳ್ಳಿಯ ತಟ್ಟೆಯನ್ನೇ ಬಳಸುತ್ತಿದ್ದರು. ನೀರು ಕುಡಿಯುವ ಲೋಟವೂ ಬೆಳ್ಳಿಯದ್ದೆ ಆಗಿದ್ದವು. ಎರಡು ಹೆಲಿಕ್ಯಾಪ್ಟರ್‌ ಹಾಗೂ ಮಿನಿ ಸಂಚಾರಿ ಸ್ಟಾರ್‌ ಹೋಟೆಲ್‌ನಂತಿದ್ದ ಒಂದು ಬಸ್‌ ಹೊಂದಿದ್ದರು. ಸಚಿವರಾಗಿದ್ದ ಸಂದರ್ಭದಲ್ಲಿ ಅಧಿವೇಶನ ಹಾಗೂ ಸಚಿವ ಸಂಪುಟ ಸಭೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲೇ ಬಂದು ಹೋಗುತ್ತಿದ್ದರು. ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಮಧ್ಯಾಹ್ನದ ಊಟಕ್ಕೆ ಹೆಲಿಕಾಪ್ಟರ್‌ನಲ್ಲೇ ಹೋಗಿ ಬರುತ್ತಿದ್ದರಂತೆ.

ಗಾಲಿ ಜನಾರ್ದನ ರೆಡ್ಡಿಗೆ ಕಾರುಗಳ ಅತಿಯಾದ ವ್ಯಾಮೋಹವಿತ್ತು. ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಎಲ್ಲ ಬಗೆಯ ಐಷಾರಾಮಿ ಕಾರುಗಳು ಅವರ ಬಳಿ ಇದ್ದವು. ನಿತ್ಯದ ಪ್ರವಾಸಕ್ಕೆ ಕಪ್ಪು ಬಣ್ಣದ ಸ್ಕಾರ್ಪಿಯೋವನ್ನು ಹೆಚ್ಚಾಗಿ ಬಳಸುತ್ತಿದ್ದರು. ಒಂದೊಂದು ಕಾರನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿದ್ದರು.

ಇಷ್ಟು ಮಾತ್ರವಲ್ಲ, ಲಕ್ಷಾಂತರ ಮೌಲ್ಯದ ಕೈಗಡಿಯಾರ, ಚಿನ್ನ ಲೇಪಿತ ಸೂಟುಗಳನ್ನು ಧರಿಸುವುದು ಅವರ ಐಷಾರಾಮಿ ಜೀವನದ ಭಾಗವಾಗಿತ್ತು.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಕೋಟ್ಯಾಂತರ ರೂ. ಮೌಲ್ಯದ ಮೂರು ಚಿನ್ನದ ಕಿರೀಟ ನೀಡಿದ್ದಾರೆ. ಮಗಳ ಮದುವೆಗೆ ಸುಮಾರು 500 ಕೋಟಿ ರೂ.ಖರ್ಚು ಮಾಡಿದ್ದರು. ಮದುವೆ ಆಮಂತ್ರಣ ಪತ್ರಿಕೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದರೆಂದು ಮೂಲಗಳು ತಿಳಿಸಿವೆ. ಹೀಗೆ ಮನೆಯೊಳಗೆ ರಾಜನಂತೆ ವಿಲಾಸಿ ಜೀವನ ನಡೆಸುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಚಿನ್ನ, ವಜ್ರಾಭರಣದ ವಿವರ: ರೆಡ್ಡಿ ತಮ್ಮ ಮನೆಗೆ ಅಲಂಕಾರಕ್ಕಾಗಿ ಚಿನ್ನ, ಬೆಳ್ಳಿ, ಮುತ್ತು ಹಾಗೂ ಪ್ಲಾಟಿನಂ ಸಹಿತವಾಗಿ ನವರತ್ನದ ಹರಳುಗಳನ್ನು ಬಳಸಿದ್ದರು. ಮನೆಯ ಹೂವಿನ ಕುಂಡ ಹಾಗೂ ಸ್ಟಾಂಡ್‌ಗಳನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ್ದರು. ಅವರ ಪತ್ನಿಯ ಬಳಿ ಚಿನ್ನ ಹಾಗೂ ವಜ್ರದ ಬಳೆ, ಸರ, ಕಿವಿಯೋಲೆ, ಮೂಗುತಿ, ನೆಕ್ಲೇಸ್‌ ಹೀಗೆ ಹತ್ತಾರು ಬಗೆಯ ಚಿನ್ನ, ವಜ್ರದ ಆಭರಣಗಳಿದ್ದವು. ಹೇರ್‌ಪಿನ್‌, ಐಸ್‌ಕ್ರೀಂ ಸ್ಪೂನ್‌, ತಟ್ಟೆ ಎಲ್ಲವೂ ಚಿನ್ನ, ಬೆಳ್ಳಿಯದ್ದಾಗಿದ್ದವು. ಜತೆಗೆ ಬೆಳ್ಳಿಯಿಂದ ಮಾಡಿದ್ದ ಮೊಬೈಲ್‌ ಫೋನ್‌ ಕೂಡ ಹೊಂದಿದ್ದರು.

ರೆಡ್ಡಿ, ಪತ್ನಿ ಹಾಗೂ ಅವರ ಮಕ್ಕಳ ಹೆಸರಿನಲ್ಲಿ ಸುಮಾರು 28.48 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಇದ್ದವು. ರೆಡ್ಡಿ ನಿತ್ಯ ಬಳಕೆಗೆ ಚಿನ್ನದ ಬೆಲ್ಟ್ ಬಳಸುತ್ತಿದ್ದು, ಅದರ ಮೌಲ್ಯ 13.15 ಲಕ್ಷವಾಗಿತ್ತು.2.58 ಕೋಟಿ ಮೌಲ್ಯದ ಚಿನ್ನದ ವಿಗ್ರಹ ಹೊಂದಿದ್ದರು. ಅವರ ಹೆಂಡತಿ ಬಳಿ 4.82 ಲಕ್ಷ ಮೌಲ್ಯದ ವಜ್ರದ ಪಟ್ಟಿ ಇತ್ತು ಎಂಬ ವಿವರಗಳು 2010-11ರಲ್ಲಿ ಲೋಕಾಯುಕ್ತಕ್ಕೆ ನೀಡಿದ ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.