BBMP ಪಕ್ಷೇತರ ಕಾರ್ಪೋರೇಟರ್ ಏಳುಮಲೈ ತೀವ್ರ ಅನಾರೋಗ್ಯದಿಂದ ವಿಧಿವಶ
Team Udayavani, Dec 6, 2018, 9:40 AM IST
ಬೆಂಗಳೂರು: ಬಿಬಿಎಂಪಿಯ ಸಗಾಯಪುರಂ ವಾರ್ಡಿನ ಪಕ್ಷೇತರ ಸದಸ್ಯ ಏಳುಮಲೈ ಅವರು ತೀವ್ರ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾರೆ.
ಮೂಗಿನಲ್ಲಿ ಗುಳ್ಳೆಯಾಗಿದೆ ಎಂದು ಚಿಕಿತ್ಸೆಗೆ ತೆರಳಿದ್ದ ಏಳುಮಲೈ ಅವರಿಗೆ ಅನೇಸ್ತೇಷಿಯಾದಿಂದ ಸಮಸ್ಯೆಯಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಹೃದಯಾಘಾತದಿಂದ ಕೋಮಾಗೆ ಜಾರಿದ್ದ ಏಳುಮಲೈ ಅವರಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬಿಬಿಎಂಪಿಯ ಸಾಮಾಜಿಕ ಕಲ್ಯಾಣ ಸಮಿತಿ ಸದಸ್ಯರಾಗಿದ್ದ ಅವರು ಸಗರಾಯಪುಂನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದರು.