ಬೋಟ್ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ

Team Udayavani, Jan 23, 2019, 1:05 AM IST

8-sa.jpg

ಕಾರವಾರ: ಇಲ್ಲಿನ ಅರಬ್ಬಿ ಸಮುದ್ರದ ನಡುಗಡ್ಡೆ ಕೂರ್ಮಗಡದ ಬಳಿ ಬೋಟ್ ಮುಳುಗಿದ ದುರ್ಘ‌ಟನೆಯಲ್ಲಿ ಮಡಿದವರ ಸಂಖ್ಯೆ 14ಕ್ಕೇರಿದೆ. ನಾಪತ್ತೆಯಾಗಿರುವ ಮತ್ತಿಬ್ಬರು ಮಕ್ಕಳಿಗಾಗಿ ಶೋಧ ಮುಂದುವರಿದಿದೆ.

ಸೋಮವಾರ ಎಂಟು ಜನರ ಶವ ದೊರಕಿದ್ದವು. ಮಂಗಳವಾರ ಮತ್ತೆ ಆರು ಮಂದಿಯ ಕಳೇಬರಗಳು ಪತ್ತೆಯಾಗಿವೆ. ಒಟ್ಟು 19 ಮಂದಿಯನ್ನು ರಕ್ಷಿಸಲಾಗಿದೆ. ದುರಂತಕ್ಕೆ ಕಾರಣ ತಿಳಿಯಲು ಮೂರು ದೃಷ್ಟಿಕೋನದ ತನಿಖೆಗೆ ಆದೇಶಿಸಲಾಗಿದ್ದು, ಬೋಟ್ ಮಾಲಿಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ನೌಕಾಪಡೆಯ ಹೆಲಿ ಕಾಪ್ಟರ್‌ ಹಾಗೂ ಡೋರ್ನಿಯರ್‌ ಏರ್‌ಕ್ರಾಫ್ಟ್‌ ಗಳು ಮಂಗಳವಾರ ಬೆಳಗಿನಿಂದ ಹತ್ತಾರು ಸುತ್ತು ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಗುಂಟ ಶವಗಳಿಗಾಗಿ ಹುಡುಕಾಟ ನಡೆಸಿದವು. ದೇವಗಡ ದ್ವೀಪ ಮತ್ತು ಕೂರ್ಮಗಡ ದ್ವೀಪದ ಮಧ್ಯೆ ಲೈಟ್‌ಹೌಸ್‌ ದ್ವೀಪದ ಬಳಿ ಬೆಳಗ್ಗೆ ಕಿರಣ್‌ (5) ಎಂಬುವರ ಶವ ಕಾಣಿಸಿತು. ತಕ್ಷಣ ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕ ಪಡೆ ಅತ್ಯಾಧುನಿಕ ಬೋಟ್‌ಗಳಿಗೆ ಮಾಹಿತಿ ನೀಡಿ ಶವಗಳನ್ನು ಪಡೆಯಲು ಸೂಚಿಸಿತು. ಮಧ್ಯಾಹ್ನ 12:30ರ ವೇಳೆಗೆ ಅಳ್ವೇವಾಡ ದಂಡೆ ಬಳಿ ಪರುಶುರಾಮ ಬಾಳಲಕೊಪ್ಪ ಅವರ ಶವ ಪತ್ತೆಯಾಗಿದೆ. ನೌಕಾದಳದ ತಿಲಾಂಚಲ ನೌಕೆಯು ಸಂಜೀವಿನಿ (14)ಯವರ ಶವವನ್ನು ಹುಡುಕಿದೆ. ಸಂಜೆ ನಾಲ್ಕರ ಹೊತ್ತಿಗೆ ಸೌಜನ್ಯ (12) ಎಂಬ ಬಾಲಕಿ ಶವ ಕೂರ್ಮಗಡ ಬಳಿ ದೊರೆತಿದೆ. ಕಾರವಾರದ ಶ್ರೇಯಸ್‌ ಪಾವಸ್ಕರ್‌(28) ಅವರ ಮೃತದೇಹ ದೇವಭಾಗ ಬೀಚ್ ಬಳಿ ಪತ್ತೆಯಾಗಿದೆ. ಸಂಜೆ ಪೊಂಡಾದ ಗೀತಾ ಹುಲಸ್ವಾರ ಅವರ ಶವ ‘ಸಾಗರ ದರ್ಶಿನಿ’ ಬಳಿ ಸಿಕ್ಕಿತು. ಪರುಶುರಾಮ ಅವರ ಮಗ ಸಂದೀಪ ಹಾಗೂ ಸೋಮಪ್ಪ ಅವರ ಮಗ ಕೀರ್ತಿ ಎಂಬ ಮಕ್ಕಳಿಗಾಗಿ ಹುಡುಕಾಟ ಮುಂದುವರಿದಿದೆ.

ಒಂದೇ ಕುಟುಂಬದ 9 ಮಂದಿ ಸಾವು: ಈ ದುರಂತದಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಹೊಸೂರಿನ ಒಂದೇ ಕುಟುಂಬದ 9 ಜನ ಸಮುದ್ರ ಪಾಲಾಗಿದ್ದಾರೆ. ಬಾಲಕನೊಬ್ಬ ಪಾರಾಗಿದ್ದಾನೆ. ಹೊಸೂರಿನ ಪರುಶುರಾಮ ಸೇರಿದಂತೆ ಅವರ ಮೂವರ ಮಕ್ಕಳು ಮತ್ತು ಪತ್ನಿ ಭಾರತಿ ಹಾಗೂ ಅವರ ಸಹೋದರನ ಮೂವರು ಮಕ್ಕಳು, ಸಹೋದರನ ಪತ್ನಿ ಮಂಜವ್ವ ಮೃತಪಟ್ಟಿದ್ದಾರೆ. ಬದುಕುಳಿದವರಲ್ಲಿ ರಾಧಾಕೃಷ್ಣ ಹುಲಸ್ವಾರ ಎಂಬುವರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನೇಹಾ ನಿಲೇಶ್‌ ಪೆಡ್ನೇಕರ್‌ ಎಂಬುವರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸಾದ ಕೊಡಲು ಬಂದವರು ಜಲ ಸಮಾಧಿಯಾದರು!

‘ದೇವರು ಎಲ್ಲರನ್ನೂ ಕರೆಸಿಕೊಂಡ. ಕನಕಪ್ಪ ಕಾರವಾರದಲ್ಲಿ 15 ವರ್ಷದಿಂದ ಇದ್ದಾನೆ. ಅವನಿಗೆ ಅಯ್ಯಪ್ಪನ ಪ್ರಸಾದ ನೀಡಿ, ಜಾತ್ರೆ ನೋಡಲು ಬಂದಿದ್ದರು. ಆದರೆ ಈಗ ಯಾರೂ ಇಲ್ಲ..’ ಎಂದು ಭಾರತಿ ಅವರ ಚಿಕ್ಕಮ್ಮ ಶೇಖವ್ವ ಪರುಶುರಾಮ ಮಾತು ಮುಂದುವರಿಸಲಾಗದೆ ಬಿಕ್ಕಳಿಸಿದರು. ‘ಉದಯವಾಣಿ’ ಜತೆ ಮಾತನಾಡಿ, ‘ಭಾರತಿ ಅವರದ್ದು ಚೆಂದದ ಸಂಸಾರ. ಹೊಲ, ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಸಣ್ಣ ಮನೆ ಸಹ ಕಟ್ಟಿಕೊಂಡಿದ್ದರು. ನಾಲ್ವರು ಮುತ್ತಿನಂತಹ ಮಕ್ಕಳಿದ್ದವು ಆದರೆ ಈಗ ದೇವರು ಅನ್ಯಾಯ ಮಾಡಿಬಿಟ್ಟ ಎಂದು ಬಿಕ್ಕಳಿಸಿದರು. ಪಕ್ಕದಲ್ಲೇ ಇದ್ದ ಗಣೇಶ್‌, ‘ಅಪ್ಪಾಜಿ ಬೇಕು’ ಎಂದು ಅಳುತ್ತಿದ್ದ. ಕಂಬನಿ ಮಿಡಿದ ಕಾರವಾರ ಜನ: ದುರಂತದ ಸುದ್ದಿ ತಿಳಿದು ಕಾರವಾರದ ಜನ ಕಂಬನಿ ಮಿಡಿದರು. ಮೃತರಲ್ಲಿ ಕಾರವಾರದ ಇಬ್ಬರು, ಕಾರವಾರ ಮೂಲದ ಪೊಂಡಾ ನಿವಾಸಿಯೊಬ್ಬ, ಕೊಪ್ಪಳ ಹಾಗೂ ಹಾವೇರಿಯ ಹೊಸೂರಿನವರು ಇದ್ದ ಕಾರಣ ಅವರ ಸಂಬಂಧಿಕರು ಕಾರವಾರ ಮೆಡಿಕಲ್‌ ಕಾಲೇಜು ಆವರಣಕ್ಕೆ ಆಗಮಿಸಿದ್ದರು. ಮೃತರ ಸಂಬಂಧಿಕರ ಆಂಕ್ರದನ ಮುಗಿಲು ಮುಟ್ಟಿತ್ತು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.