ಹಟ್ಟಿ ಚಿನ್ನದ ಗಣಿ: ಕಲ್ಲು ಮಿಶ್ರಿತ ಮಣ್ಣು ಕುಸಿದು ಕಾರ್ಮಿಕ ಸಾವು
Team Udayavani, Feb 11, 2019, 6:00 AM IST

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯ ಮಲ್ಲಪ್ಪ ಶಾಫ್ಟ್‌ನ ಭೂಮಿಯ 1500 ಮೀಟರ್ ಆಳದಲ್ಲಿ ಕಲ್ಲು ಮಿಶ್ರಿತ ಸಡಿಲ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಆನ್ವರಿ ಗ್ರಾಮದ ದಾವಲಸಾಬ್ ಎಂ.ಡಿ. ಹುಸೇನ್ (45) ಮೃತ ಕಾರ್ಮಿಕ. ಭೂಮಿಯ 1500 ಮೀಟರ್ ಅಳದಲ್ಲಿ ಮಣ್ಣು ಗಟ್ಟಿ ಇದೆಯೋ ಇಲ್ಲವೋ ಎಂಬ ಪರೀಕ್ಷೆಗೆ ತೆರಳಿದಾಗ ದುರ್ಘಟನೆ ಜರುಗಿದೆ. ಇತರೆ ಕಾರ್ಮಿಕರು ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಿನ್ನದ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕರು ಹಾಗೂ ವಿವಿಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.