ಪುನೀತ್ ಉಮಿಲ್ ಗಾನ ಬಜಾನ!
Team Udayavani, Aug 2, 2018, 2:57 PM IST
ರಂಜಿತ್ ಸುವರ್ಣ ನಿರ್ದೇಶನದ ‘ಉಮಿಲ್’ ಸಿನೆಮಾಕ್ಕೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡ ಹಾಡಿನ ಮೂಲಕ. ‘ಉಮಿಲ್’ ಚಿತ್ರ ದ ಟೈಟಲ್ ಸಾಂಗ್ ‘ರಾವೊಂದು ರಾವೊಂದು ಬತ್ತ್ಂಡ್ ಉಮಿಲ್… ನಮ್ಮ ಈ ಊರುದ ತೋಡುದ ಉಮಿಲ್’ ಎಂಬ ಕೀರ್ತನ್ ಭಂಡಾರಿ ಅವರ ಸಾಹಿತ್ಯಕ್ಕೆ ಪುನೀತ್ ಸ್ವರ ನೀಡಿದ್ದಾರೆ.
ಇದಕ್ಕೆ ಸಂಗೀತ ಸಂಯೋಜನೆ ರವಿ ಬಸ್ರೂರು. ಕೀರ್ತನ್ ಭಂಡಾರಿ ಬರೆದಿರುವ ‘ಇನಿಯೇ ಎನ್ನ ಲಾಸ್ಟ್ ನೈಂಟಿ ಸಾಂಗ್’ ಹಾಡನ್ನು ಅರವಿಂದ ಬೋಳಾರ್ ಹಾಡಿದ್ದಾರೆ. ಕೀರ್ತನ್ ಭಂಡಾರಿಯವರ ‘ಪೇರ್ ಪೇಪರ್ ಕನಯೆರೆ ಪೋಯೆ’ ಡುಯೆಟ್ ಹಾಡಿಗೆ ಅರ್ಜುನ್ ಕಾಪಿಕಾಡ್ ಹಾಡಿದ್ದಾರೆ. ಪ್ರಶಾಂತ್ ಸಿ.ಕೆ. ಯವರ ‘ಚೋಟು ಚೋಟು’ ಸಾಹಿತ್ಯಕ್ಕೆ ಉಮೇಶ್ ಮಿಜಾರ್ ಧ್ವನಿ ಇದೆ.