CONNECT WITH US  

ಅಕ್ಟೋಬರ್‌ಗೆ 'ಪುಂಡಿ ಪಣವು'

ಬಿ.ಕೆ. ಗಂಗಾಧರ ಕಿರೋಡಿಯನ್‌ ನಿರ್ದೇಶನದ 'ಪುಂಡಿ ಪಣವು' ಚಿತ್ರದ ಪೋಸ್ಟ್‌ ಪ್ರೊಡಕ್ಸನ್‌ ಮುಕ್ತಾಯ ಹಂತದಲ್ಲಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ ಅಕ್ಟೋಬರ್‌ನಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ. ಚಂದನ ವಾಹಿನಿಯಲ್ಲಿ ಬ್ರಾಡ್‌ಕಾಸ್ಟ್‌ ಆಗುತ್ತಿದ್ದ 'ಧರ್ಮೆತ್ತಿ ಮಣ್ಣ್' ಧಾರಾವಾಹಿ 'ಪುಂಡಿಪಣವು' ಆಗಿದೆ. ಗುತ್ತಿನ ಮನೆಯ ದೃಶ್ಯಗಳು, ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರ ಸೆಟ್ಟೇರಿದೆ. ತವೀಷ್‌ ಶೆಟ್ಟಿ ಈ ಸಿನೆಮಾದ ನಿರ್ಮಾಪಕರು.

ಸೂರಜ್‌ ಸನಿಲ್‌ ನಾಯಕ ನಟನಾಗಿದ್ದರೆ, ಸುವರ್ಣ ಶೆಟ್ಟಿ ನಾಯಕಿ. ರಘುರಾಮ್‌ ಶೆಟ್ಟಿ, ಗೋಪಿನಾಥ್‌ ಭಟ್‌ ಸಹಿ ತ ತುಳುನಾಡಿನ ಹಲವು ಕಲಾವಿದರು ಪುಂಡಿ ಪಣವಿನಲ್ಲಿದ್ದಾರೆ. ತುಳುರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ ಶಿವಗಿರಿ ಕಲ್ಲಡ್ಕ ಈ ಸಿನೆಮಾಗೆ ಸಂಗೀತ ಒದಗಿಸಿದ್ದಾರೆ. ಒಟ್ಟು 5 ಹಾಡುಗಳಿವೆ. ಪ್ರತಾಪ್‌ ಕದ್ರಿ ಸಹನಿರ್ದೇಶಕರಾಗಿದ್ದಾರೆ. ಉಮಾಪತಿ ಛಾಯಾಗ್ರಹಣವಿರುವ ಈ ಸಿನೆಮಾದ ಕತೆ, ಚಿತ್ರಕತೆ, ಸಂಭಾಷಣೆ ಗಂಗಾಧರ ಕಿರೋಡಿಯನ್‌ ಅವರದ್ದು. ಸಾಹಿತ್ಯ ಆರ್‌.ಎಸ್‌. ಕಳವಾರ್‌, ಸುರೇಶ್‌ ದೇವಾಡಿಗ. ಅಂದಹಾಗೆ ಗಂಗಾಧರ ಕಿರೋಡಿಯನ್‌ ಮೂಲತಃ ನಾಟಕಕಾರರು. 'ಪುಂಡಿ ಪಣವು' ಎಂಬ ಹೆಸರಿನಲ್ಲೇ ನಾಟಕ ಬರೆದು ಸುಮಾರು 150ಕ್ಕೂ ಅಧಿಕ ಪ್ರದರ್ಶನವನ್ನು ಈ ನಾಟಕ ಕಂಡಿದೆ.

ಇಂದು ಹೆಚ್ಚು ಓದಿದ್ದು

Trending videos

Back to Top