ಕೋಸ್ಟಲ್ವುಡ್ಗೆ ಬೆಳಕು ನೀಡಿದ ಪೃಥ್ವಿ!
Team Udayavani, Nov 8, 2018, 12:39 PM IST
‘ಪಿಲಿಬೈಲ್ ಯಮುನಕ್ಕ’ ಮೂಲಕ ಚಿತ್ರರಂಗದಲ್ಲಿ ಹೊಸ ಭವಿಷ್ಯ ಕಂಡುಕೊಂಡ ನಟ ಪೃಥ್ವಿ ಅಂಬರ್. ಪ್ರಸ್ತುತ ಪೃಥ್ವಿ ಕೋಸ್ಟಲ್ವುಡ್ನಲ್ಲಿ ಭರವಸೆಯ ನಟ ಎಂದೇ ಮನೆ ಮಾತಾಗಿದ್ದಾರೆ. ಇತ್ತೀಚಿನ ಬಹುತೇಕ ಎಲ್ಲ ಸಿನೆಮಾಗಳಲ್ಲಿ ಪೃಥ್ವಿ ಅವಕಾಶ ಪಡೆದಿದ್ದಾರೆ. ಸುಂದರ ಮತ್ತು ಆಕರ್ಷಕ ದೇಹ ಸೌಂದರ್ಯ ಮತ್ತು ಉತ್ತಮ ನಟನಾ ಕೌಶಲದಿಂದ ಅವರು ಕೋಸ್ಟಲ್ವುಡ್ನಲ್ಲಿ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಳ್ಳುವಂತಾಗಿದೆ.
ಸ್ವಂತ ಪರಿಶ್ರಮದ ಮೂಲಕವೇ ಬೆಳೆದು ನಿಂತ ಪೃಥ್ವಿ ಅಂಬರ್ ಕೋಸ್ಟಲ್ ವುಡ್ನ ಸಾಲು ಸಾಲು ಚಿತ್ರಗಳಲ್ಲಿ ವಿಭಿನ್ನ ಮ್ಯಾನರಿಸಂನ ಪಾತ್ರಗಳ ಮೂಲಕ ಗಮನಸೆಳೆಯುತ್ತಿದ್ದಾರೆ. ಗಾಡ್ ಫಾದರ್ ಇಲ್ಲದೆ ಸಾಧನೆಯ ಗಡಿ ದಾಟಿದ ಅವರು ತುಳು ಸಿನೆಮಾ ರಂಗದಲ್ಲಿ ಬಲು ಬೇಡಿಕೆಯ ನಟ ಕೂಡ ಹೌದು.
‘ಬರ್ಕೆ’ ಮೂಲಕ ಸಿನೆಮಾ ಇಂಡಿಸ್ಟ್ರಿಯಲ್ಲಿ ಕಾಣಿಸಿಕೊಂಡ ಪೃಥ್ವಿ ಬಳಿಕ, ಪಿಲಿಬೈಲ್ ಯಮುನಕ್ಕ, ಪಮ್ಮಣ್ಣೆ ದಿ ಗ್ರೇಟ್ (ತುಳು) ಮತ್ತು ರಾಜಾರು(ಕನ್ನಡ)ಸಿನೆಮಾಗಳ ಮೂಲಕ ಪೃಥ್ವಿ ಅವಕಾಶಗಳನ್ನು ಪಡೆಯುತ್ತಲೇ ಮುನ್ನಡೆದರು. ಅದರಲ್ಲೂ ಪಿಲಿಬೈಲ್ ಮೂಲಕ ಪೃಥ್ವಿ ಅವರಿಗೆ ಹೊಸ ಬದುಕು ದೊರೆಯಿತು ಅಂದರೆ ತಪ್ಪಲ್ಲ.
ಈ ಮಧ್ಯೆ, ತ್ರೀ ಸ್ಮೈಲ್ಸ್ , ಡಿ.ಕೆ. ಬಾಸ್, ಪ್ರವೇಶ ಮುಂತಾದ ತುಳು-ಕನ್ನಡ ಸಿನೆಮಾಗಳಲ್ಲಿಯೂ ಪೃಥ್ವಿ ನಟಿಸಿದ್ದಾರೆ. ಕೆಲವೇ ದಿನದಲ್ಲಿ ಈ ಸಿನೆಮಾವು ಬಿಡುಗಡೆ ಕಾಣಲಿದೆ. ಜತೆಗೆ ಗೋಲ್ಮಾಲ್, ರಡ್ಡ್ಎಕ್ರೆ, ಲಾಸ್ಟ್ ಬೆಂಚ್, ಕುದ್ಕನ ಮದಿಮೆ ಮುಂತಾದ ಅಪ್ಕಮಿಂಗ್ ತುಳು ಸಿನೆಮಾಗಳಲ್ಲೂ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್