CONNECT WITH US  

ಆಗುಂಬೆ ಬಳಿ ಅಪಘಾತ: ಮುದ್ರಾಡಿ ಯುವಕ ಸಾವು

ಹೆಬ್ರಿ: ಪಿಕಪ್ ವಾಹನದ ಜಾಯಿಂಟ್ ವೀಲ್ ತುಂಡಾಗಿ ನಡೆದ ಅಪಘಾತದಲ್ಲಿ ಹೆಬ್ರಿ ತಾಲೂಕಿನ ಮುದ್ರಾಡಿಯ ಯುವಕ ಸಾವನ್ನಪ್ಪಿದ ಘಟನೆ ಆಗುಂಬೆ ಸಮೀಪದ ಬಿದಿರುಗೋಡು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಮೃತರನ್ನು ಮುದ್ರಾಡಿ ನಿವಾಸಿ  ಕೃಷ್ಣ ಶೆಟ್ಟಿ ( 36 ) ಎಂದು ಗುರುತಿಸಲಾಗಿದೆ. 

ಕೃಷ್ಣ ಶೆಟ್ಟಿ ಅವರು ಮತ್ತಿಬ್ಬರೊಂದಿಗೆ ಪಿಕಪ್ ವಾಹನದಲ್ಲಿ ತೀರ್ಥಹಳ್ಳಿಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ವಾಹನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತೀವೃ ಗಾಯಗೊಂಡಿದ್ದ ಕೃಷ್ಣ ಶೆಟ್ಟಿ ಅವರನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೆ ಅವರು ಮೃತ ಪಟ್ಟಿದ್ದರು. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Trending videos

Back to Top