CONNECT WITH US  

ಕಾರ್ಕಳ: ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಂದ್‌ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವ ಕಾರ್ಕಳ ಬಸ್‌ಸ್ಟಾಂಡ್‌.​​​​​​​

ಕಾರ್ಕಳ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಕರೆ ನೀಡಿರುವ ಭಾರತ ಬಂದ್‌ಗೆ ಸೋಮವಾರ ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಪೂರ್ವಾಹ್ನ ಬೆರಳೆಣಿಕೆಯಷ್ಟು ಅಂಗಡಿಗಳು ಬಂದ್‌ ಆಗಿದ್ದು ಹೊರತುಪಡಿಸಿದರೆ ಎಂದಿನಂತೆ ಅಂಗಡಿಮುಂಗಟ್ಟಗಳು ತೆರೆದಿದ್ದವು. ಆದರೆ ಬಸ್ಸುಗಳ ಸಂಚಾರಕ್ಕೆ ಪೂರ್ಣ ಬ್ರೇಕ್‌ ಬಿದ್ದಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಜನಸಂಖ್ಯೆ ವಿರಳವಾಗಿತ್ತು. ನೂರಾರು ಬಸ್ಸುಗಳು ಓಡಾಡುತಿದ್ದ ಬಸ್ಸು ನಿಲ್ದಾಣದಲ್ಲಿ ಸೋಮವಾರ ಮಾತ್ರ ಒಂದು ಬಸ್ಸು ಕೂಡ ಇರದೇ ಬಿಕೋ ಅನ್ನುತ್ತಿತ್ತು. ಹೀಗಾಗಿ ಬೆಳಗ್ಗಿನ ವ್ಯಾಪಾರ ನಡೆಸಿ, ಅನಂತರ 11-12 ಗಂಟೆಗೆ ಕೆಲವೊಂದು ಅಂಗಡಿಗಳನ್ನು ಮುಚ್ಚಿದ್ದಾರೆ. ಪ್ರಮುಖ ಹೋಟೆಲ್‌ಗ‌ಳು, ಮೆಡಿಕಲ್‌ ಶಾಪ್‌ಗ್ಳು, ಬ್ಯಾಂಕಿಂಗ್‌ ಎಂದಿನಂತೆ ವ್ಯಾಪರ ನಡೆಸಿವೆ. ಆಟೋ ರಿಕ್ಷಾಗಳು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿ ಕಂಡುಬರುತ್ತಿತ್ತು. ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆದಿದ್ದವು.

ಕಾಂಗ್ರೆಸ್‌ನಿಂದ ಧಿಕ್ಕಾರ...
ಸೋಮವಾರ ಪೂರ್ವಾಹ್ನ ಕಾಂಗ್ರೆಸ್‌ನ ಸಾಕಷ್ಟು ಮಂದಿ ಕಾರ್ಯಕರ್ತರು ನಗರದ ಬಸ್ಸು ನಿಲ್ದಾಣದ ಸಮೀಪ ತೆರೆದಿದ್ದ ಅಂಗಡಿಗಳನ್ನು ಬಂದ್‌ ಮಾಡುವಂತೆ ಮನವಿ ಮಾಡಿದರು. ಅನಂತರ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಅನಂತರ ಅಲ್ಲಿಂದ ತಾ. ಕಚೇರಿ ಸಮೀಪಕ್ಕೆ ತೆರಳಿ ಅಲ್ಲಿಯೂ ಪ್ರತಿಭಟಿಸಿ ದಿಕ್ಕಾರ ಕೂಗಿದರು. ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಪ್ರಮುಖರಾದ ಶುಭಧ ರಾವ್‌, ಪ್ರತಿಮಾ ರಾಣೆ, ನವೀನ್‌ ದೇವಾಡಿಗ, ಅಶ್ಫಕ್‌ ಅಹ್ಮದ್‌, ವಿನ್ನಿ ಬೋಲ್ಡ್‌ ಮೆಂಡೋನ್ಸಾ, ರೆಹಮತ್‌ ಶೇಖ್‌ ಹಾಗೂ ಹಲವಾರು ಕಾರ್ಯಕರ್ತರು ಜತೆಗಿದ್ದರು.

Trending videos

Back to Top