CONNECT WITH US  

ಪಿತ್ರೋಡಿ ಸಂಪರ್ಕ ರಸ್ತೆ: ಸಂಚಾರ ಸಂಕಷ್ಟ

ಪಡುಬಿದ್ರಿ: ಉದ್ಯಾವರ ಪೇಟೆಯಿಂದ ಪಿತ್ರೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹೊಂಡ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತ ಕ್ರಮಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಸುಮಾರು 2.5 ಕಿ.ಮೀ.ಗೂ ದೂರದ ಈ ಸಂಪರ್ಕ ರಸ್ತೆಯಲ್ಲಿ ಉದ್ಯಾವರ ಪೇಟೆಯ ಆರಂಭದಲ್ಲಿಯೇ ರಸ್ತೆಯಲ್ಲಿ ಹೊಂಡ ಬಿದ್ದಿವೆ. ಕೆಲವೆಡೆ ರಸ್ತೆಯ ಹೊಂಡಗಳು ಅಪಾಯಕಾರಿಯಾಗಿ ಮಾರ್ಪಾಟಾಗಿವೆ. ಇದರಿಂದ  ರಿಕ್ಷಾ, ದ್ವಿಚಕ್ರ ವಾಹನ ಸಹಿತ ಲಘು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ರಸ್ತೆ ನಿರ್ವಹಣೆ ಬಗ್ಗೆ ಗ್ರಾಮಸಭೆಯಲ್ಲೂ ಪ್ರಸ್ತಾವವಾಗಿದ್ದರೂ ಯಾವುದೇ ಇಲಾಖಾ ಅಧಿಕಾರಿಗಳು ಸ್ಪಂದಿಸಿಲ್ಲ. ಹೆಚ್ಚಿನ ವಾಹನ ಸಂಚಾರ ಮತ್ತು ಜನಸಂಚಾರವನ್ನು ಹೊಂದಿರುವ ಪ್ರದೇಶ ಇದಾಗಿದ್ದು ಕೂಡಲೇ ರಸ್ತೆ ಸರಿಪಡಿಸಬೇಕೆನ್ನುವ ಆಗ್ರಹ ಇದೆ. ವಿವಿಧ ಕಚೇರಿಗಳಿಗೆ ಸಂಪರ್ಕ ಮತ್ತು ನಿತ್ಯ 8 ಬಸ್ಸುಗಳು ನಿಗದಿತ ಸಮಯಗಳಲ್ಲಿ ಅರ್ಧಗಂಟೆಗೊಮ್ಮೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರೂ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಕಾಂಕ್ರೀಟ್‌ ಭಾಗವೂ ಹೊಂಡ ಬಿದ್ದಿದೆ.

ಶೀಘ್ರ ರಸ್ತೆ ದುರಸ್ತಿಗೆ ಪ್ರಯತ್ನ
ರಸ್ತೆ ದುಃಸ್ಥಿತಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಮೀನುಗಾರಿಕೆ ಇಲಾಖೆ ಗಮನಕ್ಕೆ ತರಲಾಗಿದೆ. ಶೀಘ್ರ ರಸ್ತೆ ದುಃಸ್ಥಿತಿಗೆ ಹೆಚ್ಚಿನ ಪ್ರಯತ್ನ ಮಾಡುತ್ತೇವೆ.
- ರಮಾನಂದ ಪುರಾಣಿಕ್‌, ಪಿ.ಡಿ.ಒ. ಉದ್ಯಾವರ ಪಂಚಾಯತ್‌

Trending videos

Back to Top