ಮಲ್ಪೆ ಕಿನಾರೆ: ಜೆಲ್ಲಿ ಫಿಶ್ ದಾಳಿ
Team Udayavani, Oct 23, 2018, 10:23 AM IST
ಮಲ್ಪೆ: ಸಮುದ್ರದ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಆರು ಮಂದಿ ಸೋಮವಾರ ಜೆಲ್ಲಿ ಫಿಶ್ (ತೊಜ್ಜು) ದಾಳಿಗೆ ಒಳಗಾದರು. ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಅನಂತರ ಯಾರೂ ಕಡಲಿಗೆ ಇಳಿಯದಂತೆ ಎಚ್ಚರ ವಹಿಸಲಾಯಿತು. ಸರಣಿ ರಜೆಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಮಲ್ಪೆ ಬೀಚ್ನಲ್ಲಿ ಭಾರೀ ಜನಸಂದಣಿ ಇತ್ತು.
ಮೈಕ್ನಲ್ಲಿ ಎಚ್ಚರಿಕೆ
ಜೆಲ್ಲಿ ಫಿಶ್ ದಾಳಿ ಮಾಡುತ್ತಿದ್ದಂತೆ ಯಾರೂ ಸಮುದ್ರಕ್ಕೆ ಇಳಿಯದಂತೆ ಮೈಕ್ ಮೂಲಕ ಎಚ್ಚರಿಕೆ ನೀಡಲಾಯಿತು. ಜೆಲ್ಲಿ ಫಿಶ್ ಮೈಗೆ ತಾಗಿಕೊಂಡು ಹೋದರೆ ಆ ಪ್ರದೇಶದಲ್ಲಿ ಉರಿ, ದಪ್ಪಗಾಗುವುದು, ಗೀರಿದಂತೆ ಗಾಯ ಆಗುತ್ತದೆಂದು ಸಿಬಂದಿ ತಿಳಿಸಿದ್ದಾರೆ.
2-3 ದಿನ ಇರುವ ಸಾಧ್ಯತೆ
ಕೆಲವೊಮ್ಮೆ ಜೆಲ್ಲಿ ಫಿಶ್ ಮತ್ತು ತೊರಕೆ ಮೀನಿನ ಮರಿಗಳು ಕಿನಾರೆಗೆ ಬಂದಾಗ ಈ ರೀತಿ ದಾಳಿ ನಡೆಸುತ್ತವೆ. ಅವುಗಳು ಒಮ್ಮೆ ಬಂದರೆ 2-3 ದಿನ ಇರುವುದೂ ಇದೆ. ಜೆಲ್ಲಿ ಫಿಶ್ ರವಿವಾರ ಗೋಕರ್ಣ ಬೀಚ್ನಲ್ಲಿ ದಾಳಿ ನಡೆಸಿದ್ದು, ಕೆಲವರಿಗೆ ಗಾಯವಾಗಿತ್ತು.
ಜೆಲ್ಲಿ ಫಿಶ್ನಲ್ಲಿ ಎರಡು ರೀತಿ ಇದ್ದು, ಒಂದು ಬಿಳಿಯದು, ಇನ್ನೊಂದು ನಸು ಕೆಂಪಾಗಿರುತ್ತದೆ. ಕೆಂಪು ಜೆಲ್ಲಿ ಫಿಶ್ ಸ್ಪರ್ಶಿಸಿದರೆ ಉರಿ ಹೆಚ್ಚು. ಮಲ್ಪೆ ಸೈಂಟ್ ಮೆರೀಸ್ ದ್ವೀಪದ ಒಂದು ಬದಿಯಲ್ಲಿ ಈ ರೀತಿಯ ಮೀನು ಸಾಮಾನ್ಯ. ಆ ಪ್ರದೇಶಕ್ಕೆ ಯಾರೂ ಹೋಗದಂತೆ ತಡೆಯಲಾಗುತ್ತಿದೆ. ಬೀಚ್ನಲ್ಲಿ ಆ್ಯಂಬುಲೆನ್ಸ್ ಸೇವೆ ಇದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ. ಪಣಂಬೂರು ಕಿನಾರೆಯಲ್ಲೂ ಜೆಲ್ಲಿ ಫಿಶ್ ಕಂಡುಬಂದಿದೆ, ಆದರೆ ಯಾರೂ ಗಾಯಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ