ಹೆಲಿಕಾಪ್ಟರ್ನಲ್ಲಿ ಬಂದು ಮೀನು ಡೀಲ್ !?
Team Udayavani, Nov 1, 2018, 11:02 AM IST
ಮಲ್ಪೆ: ಕಾರವಾರ – ಗೋವಾ ಗಡಿಭಾಗದ ಅರಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಸಿಬಂದಿ ಹೆಲಿಕಾಪ್ಟರ್ ಮೂಲಕ ಬಂದು ಮೀನುಗಾರರಿಂದ ಪುಕ್ಕಟೆಯಾಗಿ ಮೀನು ಪಡೆದುಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಮೀನುಗಾರಿಕೆ ಬೋಟ್ ಮಲ್ಪೆಯ ಬಂದರಿನದ್ದೆಂದು ತಿಳಿದು ಬಂದಿದೆ. ಗೋವಾದಲ್ಲಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ವಾಪಸಾಗುವಾಗ ಕಾರವಾರದ ಬಳಿ ಹೆಲಿಕಾಪ್ಟರ್ನಲ್ಲಿ ಬೋಟಿನ ಸಮೀಪಕ್ಕೆ ಬಂದು ಮೀನು ಕೊಡುವಂತೆ ಸನ್ನೆ ಮಾಡಿದ್ದಾರೆ. ಬಳಿಕ ಹಗ್ಗದ ಮೂಲಕ ಚೀಲವನ್ನು ಇಳಿಸಿ ಮೀನು ಪಡೆದುಕೊಂಡು ಹೋಗಿದ್ದಾರೆ.
ಈ ಎಲ್ಲ ದೃಶ್ಯವನ್ನು ದೂರದಲ್ಲಿರುವ ಇನ್ನೊಂದು ಬೋಟ್ನವರು ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ದೇಶದ ಭದ್ರತೆಗೆ ಬಳಸಬೇಕಾದ ಹೆಲಿಕಾಪ್ಟರನ್ನು ಸ್ವಂತಕ್ಕೆ ಬಳಸಿರುವ ಸೇನಾ ಸಿಬಂದಿಯ ವರ್ತನೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ