ಮಾರಿಕಾಂಬೆ ಊರಿನಲ್ಲಿ ಅಬ್ಬರಕ್ಕೇರಿದ ಚುನಾವಣೆ

Team Udayavani, May 6, 2018, 6:55 AM IST

sirsi-assembly-constituency.jpg

ಕರ್ನಾಟಕದ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ, ಜಲಪಾತಗಳ ಕ್ಷೇತ್ರ ಎಂದೇ ಹೆಸರಾದ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಜಲಪಾತದ ಭೋರ್ಗರೆತ ಕಡಿಮೆ ಆದರೂ ಚುನಾವಣಾ ಕಾವು ಹೆಚ್ಚುತ್ತಿದೆ.
 
6ನೇ ಬಾರಿ ವಿಧಾನಸಭೆ ಮೆಟ್ಟಿಲೇರುವ ಉಮೇದಿನಲ್ಲಿರುವ ಶಾಸಕ, ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕಾಂಗ್ರೆಸ್‌, ಜೆಡಿಎಸ್‌ ಬಲಾಬಲದ ಸ್ಪ‌ರ್ಧೆ ಒಡ್ಡಿವೆ. 8 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿರುವ, ಮಾಜಿ ಸಿಎಂ ಬಂಗಾರಪ್ಪ ಗರಡಿಯಲ್ಲಿ ಪಳಗಿದ ಭೀಮಣ್ಣ ನಾಯ್ಕ, ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಕುಟುಂಬದ ಶಶಿಭೂಷಣ ಹೆಗಡೆ ಪ್ರಬಲ ಪೈಪೋಟಿ ನೀಡಿದ್ದಾರೆ. ಕಾಗೇರಿ ಅವರಿಗೆ ಗೆಲುವು ಸುಲಭದಲ್ಲಿಲ್ಲ ಎಂಬಷ್ಟು ನಿಚ್ಚಳವಾಗುತ್ತಿದೆ ಪೈಪೋಟಿ.ಇನ್ನೂ ಮೂವರು ಕಣದಲ್ಲಿದ್ದರೂ ಅಷ್ಟಾಗಿ ಪರಿಣಾಮ ವಾಗುವುದಿಲ್ಲ. ಇಲ್ಲಿ ನಾಮಧಾರಿ, ಹವ್ಯಕರ ಮತಗಳೇ ಹೆಚ್ಚು. ಈ ಬಾರಿ ಕೂಡ ಹವ್ಯಕ ಸಮುದಾಯದ ಇಬ್ಬರು ಕಣದಲ್ಲಿದ್ದಾರೆ. ಇನ್ನೊಬ್ಬರು ನಾಮಧಾರಿ ಸಮುದಾಯ ದವರಾಗಿದ್ದಾರೆ. 

ಮೂರೂ ಪಕ್ಷಗಳ ಅಧ್ಯಕ್ಷರೂ ನಾಮಧಾರಿ ಸಮುದಾಯಕ್ಕೆ ಸೇರಿದವರು. ಅದರಲ್ಲಿ ಒಬ್ಬರು ಕಾಂಗ್ರೆಸ್‌ ಅಭ್ಯರ್ಥಿ. ಇನ್ನೂ ವಿಶೇಷ ಎಂದರೆ ಈ ಮೂವರೂ ಇದೇ ಕ್ಷೇತ್ರದ ಮತದಾರರೇ. ಈ ಕಾರಣದಿಂದಲೂ ಮತಗಳು ಯಾರಿಗೆ ಎಷ್ಟು ಒಡೆದು ಹೋಗುತ್ತವೆ ಎಂಬ ಚರ್ಚೆಗಳು ನಡೆದಿವೆ. ಯಾರದ್ದೇ ಗೆಲುವಾ ದರೂ ಅದರ ಅಂತರ ಕಡಿಮೆಯೇ ಎಂಬುದು ಮೇಲ್ನೋಟಕ್ಕೂ  ಕಾಣುವ ಸಂಗತಿಯಾಗಿದೆ!

ನಿರ್ಣಾಯಕ ಅಂಶವೇನು?: ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭಿವೃದ್ಧಿಗಾಗಿ ಬೆಂಬಲಿಸಿ ಎಂದಿದ್ದರೆ, ಮೌಲ್ಯಾ ಧಾ ರಿತ ರಾಜಕಾರಣಿ ಹಾಗೂ ಹೆಗಡೆ ಕುಟುಂಬದ ಕುಡಿ, ಕುಮಾರಸ್ವಾಮಿ ಬೆಂಬಲಿಸಲು ಮತ ಕೊಡಿ ಎಂದು ಜೆಡಿಎಸ್‌ ಮತ ಕೇಳುತ್ತಿದೆ. ಸರಕಾರ ಬಿಜೆಪಿಯದ್ದೇ, ಕ್ಷೇತ್ರಕ್ಕೆ ಅನುಭವ ಇದ್ದವರು ಜನಪ್ರತಿನಿಧಿ ಯಾದರೆ ಅಭಿವೃದ್ಧಿಗೆ ಹೆಚ್ಚು ಅನುದಾನ ತರಬಹುದು ಎಂದು ಬಿಜೆಪಿ ಮತ ಕೇಳುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸ್ವ ಕ್ಷೇತ್ರವೂ ಇದೇ ಆಗಿದ್ದರಿಂದ ಕ್ಷೇತ್ರದ ಗೆಲುವು ಹೆಗಡೆ ವರ್ಚಸ್ಸಿಗೂ ಕನ್ನಡಿ ಎಂಬ ಮಾತುಗಳೂ ಇವೆ. ಭೀಮಣ್ಣ ಗೆಲ್ಲಿಸಲು ದೇಶಪಾಂಡೆ ಸಾರಥ್ಯ ವಹಿಸಿದ್ದರೆ, ಶಶಿಭೂಷಣ ಗೆಲ್ಲಿಸಲು ಕುಮಾರಸ್ವಾಮಿ, ಮಧು ಬಂಗಾರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ಮಧು ಅವರ ಸಹೋದರ ಮಾವ ಭೀಮಣ್ಣ. ಅವರು ಕಾಂಗ್ರೆಸ್‌ ಅಭ್ಯರ್ಥಿ!

ರಾಜ್ಯದಲ್ಲೂ ಬಿಜೆಪಿ ಬಂದಾಗ ಅಭಿವೃದ್ಧಿಗೆ ವೇಗ. ಜತೆಗೆ  ಕ್ಷೇತ್ರದ ಅಭಿವೃದ್ಧಿಯೂ ಸಾಧ್ಯ. ಹೀಗಾಗಿ ಕ್ಷೇತ್ರದ ಹಿತಕ್ಕಾಗಿ ನನ್ನ ಸ್ಪರ್ಧೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ

ಹಲವು ಆಶಯಗಳ ಜತೆ ಸ್ಪರ್ಧಿಸಿದ್ದೇನೆ. ಕಾಂಗ್ರೆಸ್‌ಗೆ ಮಾತ್ರ ಜನತೆಗೆ ನೆಮ್ಮದಿ ಕೊಡಲು ಸಾಧ್ಯ. ರಾಜ್ಯಕ್ಕೇ ಮಾದರಿ ಕ್ಷೇತ್ರವಾಗಿಸಬೇಕೆಂಬ ಬಯಕೆಯಿದೆ.
– ಭೀಮಣ್ಣ ನಾಯ್ಕ, ಕಾಂಗ್ರೆಸ್‌ ಅಭ್ಯರ್ಥಿ

ಸ್ಪಷ್ಟ ಗುರಿಯ ಕ್ರಿಯಾಯೋಜನೆ ಜತೆ ಕೆಲಸ ಮಾಡುವ ಇಂಗಿತವಿದೆ. ಮೂಲ ಭೂತ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಲ್ಲಿ ಪ್ರಯತ್ನ ನಡೆಸುತ್ತೇನೆ.
– ಡಾ.ಶಶಿಭೂಷಣ ಹೆಗಡೆ , ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದ ಒಟ್ಟು ಮತದಾರರು: 1,90,741
ಪುರುಷರು: 96,765
ಮಹಿಳೆಯರು: 93,974
ಇತರೆ:02

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.