CONNECT WITH US  

ಸಚಿವ ಹೆಗಡೆಯಷ್ಟು ನೀಚ ರಾಜಕಾರಣಿ ಇನ್ನೊಬ್ಬನಿಲ್ಲ: ಅಸ್ನೋಟಿಕರ್‌

ಕಾರವಾರ: ಸಚಿವ ಅನಂತ್‌ ಕುಮಾರ್‌ ಹೆಗಡೆಯಷ್ಟು ನೀಚ ರಾಜಕಾರಣಿ ಕರ್ನಾಟಕದಲ್ಲೂ ಇಲ್ಲ, ದೇಶದಲ್ಲೂ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ್‌ ಅಸ್ನೋಟಿಕರ್‌ ಏಕವಚನದಲ್ಲೇ ನಿಂದಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ನೋಟಿಕರ್‌ 'ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿದ ಧ್ವಜ ನಾನು ಹಾರಿಸಿದ್ದು ಎಂದು ಆರ್‌ಎಸ್‌ಎಸ್‌ನವರ ಬಳಿ ಹೇಳಿಕೊಂಡು 5 ಬಾರಿ ಸಂಸದನಾಗಿದ್ದಾನೆ. ಅವನಿಗೆ ಅಮಿತ್‌ ಶಾ ಮಿನಿಸ್ಟರ್‌ ಮಾಡಿದ್ರು. ಈಗ ಅವನಿಗೆ ಉಂಡ ತುತ್ತು ಹೊರಗೆ ತೆಗೆಯಲಿಕ್ಕೆ ಆಗುವುದಿಲ್ಲ' ಎಂದು ತೀವ್ರ ವಾಗ್ದಾಳಿ ನಡೆಸಿದರು. 

'ಇವನು ಈ ಚುನಾವಣೆಯಲ್ಲಿ ಕಾಗೇರಿಗೆ ವಿರೋಧ ಮಾಡಿದ್ದಾನೆ . ಬಿಜೆಪಿ ಕಾರ್ಯಾಲಯದಲ್ಲಿ  ಕಾಗೇರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾನೆ. ಡಾಕ್ಟರ್‌ಗೆ ಹೊಡೆದಿದ್ದಾನೆ. ಅಂತವನ ಕುರಿತಾಗಿ  ಮಾತನಾಡುವಂತದ್ದು ಸರಿಯಲ್ಲ' ಎಂದರು. 

Trending videos

Back to Top