CONNECT WITH US  

ಜತೆಗೂಡಿದರೆ ಜಗತ್ತಿಗೇ ಲಾಭ: ವಾಲ್ ಸ್ಟ್ರೀಟ್ ನಲ್ಲಿ ಮೋದಿ ಲೇಖನ

ವಾಷಿಂಗ್ಟನ್‌: "ಸಾಕಷ್ಟು ವರ್ಷಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತ ಬಂದಿರುವ ಅನು ಭವ ಭಾರತಕ್ಕೆ ಇದೆ. ಭಯೋತ್ಪಾದನೆ ಎದುರಿಸಬಲ್ಲ ಆಡಳಿತಾತ್ಮಕ ಬದ್ಧತೆ ಅಮೆರಿಕ ದೇಶಕ್ಕಿದೆ. ಹೀಗಾಗಿ ಇವೆರಡರ ಸಂಗಮದಿಂದ ವಿಶ್ವಕ್ಕೆ ಲಾಭವಾಗಲಿದೆ'.

ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಅಮೆರಿಕ ಪ್ರವಾಸದಲ್ಲಿರುವ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಐತಿಹಾಸಿಕ ಭೇಟಿಗೂ ಮುನ್ನ ಇಲ್ಲಿನ ಪ್ರಮುಖ ಪತ್ರಿಕೆಯಾದ "ವಾಲ್‌ಸ್ಟ್ರೀಟ್‌ ಜರ್ನಲ್‌'ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.  

ಭಾರತ-ಅಮೆರಿಕ ವ್ಯೂಹಾತ್ಮಕ ಸಂಬಂಧದ ತರ್ಕವೂ ಪ್ರಶ್ನಾತೀತ. ಭಯೋತ್ಪಾದನೆ, ತೀವ್ರಗಾಮಿ ಸಿದ್ಧಾಂತ ಹಾಗೂ ಭದ್ರತಾ ಅಪಾಯಗಳಿಂದ ಜಗತ್ತನ್ನು ರಕ್ಷಿಸಬೇಕೆನ್ನುವ ಉದ್ದೇಶವನ್ನು ಎರಡೂ ದೇಶಗಳು ಹೊಂದಿವೆ. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಕುರಿತು ಅವರು ತಮ್ಮ ಲೇಖನದಲ್ಲಿ ಪ್ರಸ್ತಾವಿಸಿದ್ದಾರೆ. 

ಭಾರತ ಮತ್ತು ಅಮೆರಿಕ ಅತ್ಯಂತ ಬಲಿಷ್ಠ ಮತ್ತು ಆಳವಾದ ಪಾಲುದಾರಿಕೆಯನ್ನು ಬೆಳೆಸಿಕೊಳ್ಳುತ್ತಿದ್ದು, ಅದು ಬೆಲ್ಟ್ವೇ ಮತ್ತು ರೈಸಿನಾ ಹಿಲ್ಸ್‌ನಾಚೆಗೂ ವಿಸ್ತರಿಸುತ್ತಿದೆ ಎಂದಿದ್ದಾರೆ. ಇಲ್ಲಿ ಬೆಲ್ಟ್ವೇ ಅಂದರೆ, ವಾಷಿಂಗ್ಟನ್‌ ಡಿಸಿಯನ್ನು ಸುತ್ತುವರಿದಿರುವ ಇಂಟರ್‌ಸ್ಟೇಟ್‌ 495 ಎಂಬ ಹೆದ್ದಾರಿಯಾಗಿದೆ. ರೈಸಿನಾ ಹಿಲ್ಸ್‌ ಎಂದರೆ, ಭಾರತದ ರಾಷ್ಟ್ರಪತಿ ಭವನವಾಗಿದೆ.

ಹಿಂದಿನ ಭೇಟಿ ಬಗ್ಗೆ ಉಲ್ಲೇಖ: ಕಳೆದ ವರ್ಷದ ಜೂನ್‌ನಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿ, ಯುಎಸ್‌ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದನ್ನೂ ಪ್ರಧಾನಿ ಮೋದಿ ಲೇಖನದಲ್ಲಿ ಸ್ಮರಿಸಿದ್ದಾರೆ. ನಮ್ಮ ಎರಡೂ ದೇಶಗಳ ನಡುವಿನ ಸಂಬಂಧ ಬೆಳೆಯುತ್ತಿದೆ ಎನ್ನುವ ಆತ್ಮವಿಶ್ವಾಸದಿಂದಲೇ ನಾನು ಇಲ್ಲಿಗೆ ಮತ್ತೂಮ್ಮೆ ಆಗಮಿಸಿದ್ದೇನೆ. ಈ ಆತ್ಮವಿಶ್ವಾಸ ಬಂದಿದ್ದು ನಮ್ಮ ವ್ಯವಸ್ಥೆಯ ಸ್ಥಿರತೆ ಮತ್ತು ಮೌಲ್ಯಗಳಿಂದ. ಯಾವಾಗ ಭಾರತ ಮತ್ತು ಅಮೆರಿಕ ಒಂದಾಗಿ ಕೆಲಸ ಮಾಡುತ್ತದೋ ಆಗ ಅದರ ಪ್ರತಿಫ‌ಲವು ಇಡೀ ಜಗತ್ತಿಗೆ ದಕ್ಕುತ್ತದೆ. ರೋಟಾವೈರಸ್‌, ಡೆಂಗ್ಯೂ ಮತ್ತಿತರ ರೋಗಗಳಿಗೆ ಕಂಡುಹಿಡಿಯಲಾದ ಲಸಿಕೆಗಳೂ ಇದಕ್ಕೆ ಸಾಕ್ಷಿ ಎಂದಿದ್ದಾರೆ ಮೋದಿ.

ಭಾರತದ ಕಂಪೆನಿಗಳು ಅಮೆರಿಕದಲ್ಲಿ ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ತಮ್ಮದೇ ಆದ ಕೊಡುಗೆ ಗಳನ್ನು ನೀಡುತ್ತಿವೆ. ಅಮೆರಿಕದಲ್ಲಿ ಭಾರತದ ಕಂಪೆನಿ ಗಳು ಸುಮಾರು 15 ಶತಕೋಟಿ ಡಾಲರ್‌ ಹೂಡಿಕೆ ಮಾಡಿವೆ.  ಅಂತೆಯೇ, ಇಲ್ಲಿನ ಕಂಪೆನಿಗಳು ಭಾರತ ದಲ್ಲಿ 20 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಿ ಜಾಗತಿಕ ಪ್ರಗತಿಯತ್ತ ದಾಪುಗಾಲು ಇಡುತ್ತಿವೆ ಎಂದೂ ಮೋದಿ ಹೇಳಿದ್ದಾರೆ. ಎಚ್‌1ಬಿ ವೀಸಾ ನೀತಿ, ಭಾರತೀಯರಿಗೆ ಹೊರಗುತ್ತಿಗೆ ಮುಂತಾದ ವಿಚಾರದಲ್ಲಿ ಟ್ರಂಪ್‌ ಆಡಳಿತವು ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ.

ಮೋದಿಗಾಗಿ ಹಿಂದಿ ಕಲಿತ ಟ್ರಂಪ್‌ !
ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್‌ ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆ. ಅಚ್ಚರಿಯ ವಿಷಯ ಅದಲ್ಲ, ಮೋದಿಗಾಗಿ ಟ್ರಂಪ್‌ ಹಿಂದಿ ಕಲಿತಿದ್ದಾರಂತೆ ! ಹೀಗೆಂದು ಶಿಕಾಗೋ ಉದ್ಯಮಿ ಶಲಭ್‌ಶಲ್ಲಿ ಕುಮಾರ್‌ ಹೇಳಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಸಮುದಾಯವನ್ನು ಟ್ರಂಪ್‌ರತ್ತ ಆಕರ್ಷಿಸುವಲ್ಲಿ ಶಲಭ್‌ ಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದರು. "ಮೋದಿ ಯನ್ನು ಭೇಟಿಯಾಗಲು ಉತ್ಸುಕರಾಗಿರುವ ಟ್ರಂಪ್‌ ಅವರು, ಭಾರತದ ಬಗ್ಗೆ, ಮೋದಿಯವರ ಬಗ್ಗೆ, ಅವರ ಕನಸುಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಒಟ್ಟಾರೆ ಮೋದಿಯವರನ್ನು ಅಧ್ಯಯನ ನಡೆಸಿ ದ್ದಾರೆ. ಟ್ರಂಪ್‌ ಅವರು ಈಗ ಹಿಂದಿ ಪದಗಳನ್ನು ಕಲಿತಿದ್ದಾರೆ.

Trending videos

Back to Top