ಬ್ರಿಟನ್ನಲ್ಲೂ ದಾವೂದ್ ಆಸ್ತಿ: ಭಾರತ ಕೊಟ್ಟ ದಾಖಲೆಗೆ ಪುಷ್ಟಿ
Team Udayavani, Feb 4, 2018, 6:00 AM IST
ಲಂಡನ್: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಸ್ತಿ ಇದೆ ಎಂಬ ವಾದ ಹಿಂದಿನಿಂದಲೂ ಕೇಳಿಬರುತ್ತಿತ್ತು. ಆದರೆ, ಬ್ರಿಟನ್ನಲ್ಲಿಯೂ ಆತ ಹೊಂದಿರುವ ಆಸ್ತಿಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಆಧಾರದಲ್ಲಿ ತನಿಖೆ ನಡೆಸಿರುವ “ದ ಟೈಮ್ಸ್’ ಪತ್ರಿಕೆ, ಆ ಆಸ್ತಿಗಳಿಗೂ ಭೂಗತ ಪಾತಕಿಗೂ ನಿಕಟ ಸಂಪರ್ಕ ಇದೆ ಎಂಬ ಅಂಶವನ್ನು ಕಂಡುಕೊಂಡಿದೆ.
ದಾಖಲೆಗಳ ಪ್ರಕಾರ, ಭೂಗತ ಪಾತಕಿಯ ಬಲಗೈ ಬಂಟ ಮಹಮೂದ್ ಇಕ್ಬಾಲ್ ಮಿರ್ಚಿ ಮೆಮನ್ ಬ್ರಿಟನ್ನಾದ್ಯಂತ ಇರುವ ಆಸ್ತಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ. ಅದರಲ್ಲಿ ಹೋಟೆಲ್ಗಳು, ವೈಭವೋಪೇತ ಬಂಗಲೆಗಳು, ವಾಣಿಜ್ಯಿಕ ಕಟ್ಟಡಗಳು ಸೇರಿವೆ. ಈ ಕಂಪನಿಯ 11 ಮಂದಿ ನಿರ್ದೇಶಕರಲ್ಲಿ ಆತನೂ ಒಬ್ಬನಾಗಿದ್ದಾನೆ.
ಯುನೈಟೆಡ್ ಕಿಂಗ್ಡಮ್ನ ಕಂಪನೀಸ್ ಹೌಸ್ ಮತ್ತು ಲ್ಯಾಂಡ್ ರಿಜಿಸ್ಟ್ರಿಗೆ ಕೇಂದ್ರ ಸರ್ಕಾರ ದಾವೂದ್ ಇಬ್ರಾಹಿಂ ಹೊಂದಿರುವ ಆಸ್ತಿಗಳ ಮಾಹಿತಿ ನೀಡಿತ್ತು. ಮಿಶಾ ಗ್ಲೆನ್ನಿ ಎಂಬುವರು ಬರೆದ ಪುಸ್ತಕ “ಮ್ಯಾಕ್ ಮಾಫಿಯಾ: ಎ ಜರ್ನಿ ಥ್ರೂ ದ ಗ್ಲೋಬಲ್ ಕ್ರಿಮಿನಲ್ ಅಂಡರ್ವರ್ಲ್ಡ್’ನಲ್ಲಿ ದಾವೂದ್ ಇಬ್ರಾಹಿಂನ ಪಾತಕ ಕೃತ್ಯಗಳ ಬಗ್ಗೆ ದಾಖಲಿಸಿದ್ದಾರೆ. ಈ ಪುಸ್ತಕವನ್ನು ಆಧಾರವಾಗಿರಿಸಿಕೊಂಡು “ಬಿಬಿಸಿ ವನ್’ನಲ್ಲಿಯೂ ವಿಶೇಷ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?