CONNECT WITH US  

ನಿರ್ಬಂಧ: ಗೆದ್ದ ಟ್ರಂಪ್‌

ವಾಷಿಂಗ್ಟನ್‌: ವಲಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಜಾರಿಗೆ ತಂದಿದ್ದ ವಿವಾದಾತ್ಮಕ ಪ್ರಯಾಣ ನಿಷೇಧ ನಿಯಮಕ್ಕೆ ಅಮೆರಿಕದ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಮುಸ್ಲಿಮರೇ ಅಧಿಕವಿರುವ 6 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿ ಟ್ರಂಪ್‌ ಹೊರಡಿಸಿದ್ದ ಆದೇಶ ಹಲವು ತಿರುವುಗಳನ್ನು ಕಂಡಿತ್ತು. ಬಳಿಕ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಮಂಗಳವಾರ ತೀರ್ಪು ನೀಡಿದ ನ್ಯಾಯಾಲಯ, ಅಕ್ರಮ ವಲಸಿಗರನ್ನು ನಿಯಂತ್ರಿಸುವ ಅಧಿಕಾರ ಅಧ್ಯಕ್ಷರಿಗಿದೆ ಎಂದಿದ್ದು, ಪ್ರಯಾಣ ನಿರ್ಬಂಧಕ್ಕೆ ಅನುಮತಿ ಕಲ್ಪಿಸಿದೆ. ಜತೆಗೆ, ಈ ಕಾನೂನು ಮುಸ್ಲಿಮರ ಮೇಲೆ ತಾರತಮ್ಯ ಎಸಗುತ್ತದೆ ಹಾಗೂ ಇದು ಟ್ರಂಪ್‌ ಅವರ ಅಧಿಕಾರಕ್ಕೂ ಮೀರಿದ್ದು ಎಂಬ ವಾದವನ್ನು ಕೋರ್ಟ್‌ ಅಲ್ಲಗಳೆದಿದೆ.

Trending videos

Back to Top