ಆಫ್ಘಾನ್: 20 ಪೊಲೀಸರ ಹತ್ಯೆ
Team Udayavani, Sep 10, 2018, 2:00 AM IST

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ನಾಯಕ ಅಹ್ಮದ್ ಶಾ ಮಸೂದ್ ಅವರ 17ನೇ ವರ್ಷದ ಪುಣ್ಯತಿಥಿ ವೇಳೆ ಬಂಡುಕೋರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ. ಕಾಬೂಲ್‌ನ ಪಶ್ಚಿಮ ಭಾಗದಲ್ಲಿ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ ಉಗ್ರರು, 10 ಮಂದಿ ಪೊಲೀಸರನ್ನು ಹತ್ಯೆಗೈದಿದ್ದಾರೆ. ಮತ್ತೂಂದು ಪ್ರಕರಣದಲ್ಲಿ, ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಚೆಕ್‌ಪಾಯಿಂಟ್‌ವೊಂದರ ಮೇಲೆ ಉಗ್ರರು ನಡೆಸಿದ ದಾಳಿ ಹಾಗೂ ಪ್ರತಿದಾಳಿಯಿಂದ 10 ಭದ್ರತಾ ಸಿಬ್ಬಂದಿ, 12ಕ್ಕೂ ಅಧಿಕ ಬಂಡುಕೋರರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇಂದು ಹೆಚ್ಚು ಓದಿದ್ದು
Feb 20, 2019 04:54pm