150 ಕೋಟಿ ಖಾತೆ ಡಿಲೀಟ್
Team Udayavani, Nov 17, 2018, 7:13 AM IST
ವಾಷಿಂಗ್ಟನ್: ಸಾಮಾಜಿಕ ಅಂತರ್ಜಾಲ ತಾಣ ಫೇಸ್ಬುಕ್ ಕಳೆದ ಆರು ತಿಂಗಳಲ್ಲಿ 150 ಕೋಟಿ ನಕಲಿ ಖಾತೆಗಳನ್ನು ಅಳಿಸಿಹಾಕಿದೆ ಎಂದು ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಹೇಳಿದ್ದಾರೆ. ಫೇಸ್ಬುಕ್ನ ಕಾರ್ಯನಿರ್ವಹಣೆಯ ಬಗ್ಗೆ ವಿಸ್ತೃತವಾಗಿ ಬರೆದಿರುವ ಮಾರ್ಕ್, ಬಹುತೇಕ ಸ್ಪ್ಯಾಮ್, ತಪ್ಪು ಮಾಹಿತಿ ಹಬ್ಬಿಸುವಿಕೆಯಲ್ಲಿ ಈ ನಕಲಿ ಖಾತೆಗಳು ಸಕ್ರಿಯವಾಗಿದ್ದವು. ನಕಲಿ ಖಾತೆಗಳನ್ನು ಪತ್ತೆ ಮಾಡುವಲ್ಲಿ ಫೇಸ್ಬುಕ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಫೇಸ್ಬುಕ್ನಲ್ಲಿ ಮಾಸಿಕ 250 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಡೇಟಾ ಸೋರಿಕೆ ಆರೋಪಗಳು ಕೇಳಿಬಂದಾಗ ಆರಂಭದಲ್ಲಿ ಫೇಸ್ಬುಕ್ ಸುದ್ದಿ ಮುಚ್ಚಿಹಾಕಲು ಪ್ರಯತ್ನಿಸಿತ್ತು ಎಂದು ಪತ್ರಿಕೆಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಮಾರ್ಕ್ ಈ ವಿವರಣೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ