CONNECT WITH US  

ಹಿರಿಯರ ಮಾರ್ಗದರ್ಶನ ಅಗತ್ಯ: ಶಿವಾಚಾರ್ಯರು

ಯಾದಗಿರಿ: ಅರ್ಥವತ್ತಾದ ಧಾರ್ಮಿಕತೆಯಿಂದ ಲೋಕ ಕಲ್ಯಾಣ ಸಾಧ್ಯವಿದೆ. ಈ ದಿಸೆಯಲ್ಲಿ ಶ್ರಾವಣ ಮಾಸದ ದಿನಗಳಂದು ಭಕ್ತರಲ್ಲಿ ಆಧ್ಯಾತ್ಮಿಕ ವಿಚಾರ ಉಂಟು ಮಾಡುವಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವಾರಣಾಸಿ ಎಲ್ಹೇರಿ ಬಂಗಿಮಠದ ಮಳೆಖೇಡ ಕೊಟ್ಟೂರೇಶ್ವರ ಶಿವಾಚಾರ್ಯರು ಹೇಳಿದರು.

ನಗರದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ಆಚಾರ, ವಿಚಾರಗಳು ಉತ್ತಮ ಬದಕನ್ನು ಕಂಡು
ಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ ನಾವು ನಮ್ಮದೇ ಸಾಧನೆಯೊಂದಿಗೆ ಪ್ರಯತ್ನ ಮಾಡಬೇಕು. ನಮ್ಮಲ್ಲಿನ ಜ್ಞಾನ, ತತ್ವವನ್ನು ಕಂಡುಕೊಳ್ಳುವಲ್ಲಿ ಗುರು- ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.

ಮಾನವೀಯ ಮೌಲ್ಯಗಳನ್ನು ಹೊಂದಿದ ವಚನಗಳು ಸೇರಿದಂತೆ ಶ್ರೇಷ್ಠ ಶರಣರ ಬದಕನ್ನು ನಾವು ಕಂಡುಕೊಂಡಾಗ ಪರಿಪೂರ್ಣ ವ್ಯಕ್ತಿಗಳು ಆಗಲು ಸಾಧ್ಯವಿದೆ ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ, ಶಿವಯ್ಯ, ಶಿವುಕುಮಾರ, ಸಿದ್ದಯ್ಯಸ್ವಾಮಿ ದಂಡಿಗಿಮಠ, ಚಂದ್ರಶೇಖರ ರುಮಾಲ, ಆನಂದ, ಸಿದ್ಧಲಿಂಗಯ್ಯ, ವಿರೇಶಕುಮಾರ ಸೇರಿದಂತೆ ಭಕ್ತಾದಿಗಳು ಇದ್ದರು. 


Trending videos

Back to Top