“ಡಬ್ಬಲ್ ಇಂಜಿನ್’ನಲ್ಲಿ ಸಿಲುಕಿದ ಹುಡುಗ್ರು: ಬೊಂಬಾಟ್ ನಾಟಿ ಟ್ರೈಲರ್ ವೀಕ್ಷಿಸಿ
Team Udayavani, May 18, 2018, 3:19 PM IST
ಪಕ್ಕಾ ಯುವಕರನ್ನು ಸೆಳೆಯುವ “ಡಬ್ಬಲ್ ಇಂಜಿನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಗಂತೂ ಡಬಲ್ ಮೀನಿಂಗ್ ಡೈಲಾಗ್ ಸಕತ್ ಖುಷಿ ತಂದಿದೆ, ಅಲ್ಲದೇ ಯುವಕರನ್ನೇ ಟಾರ್ಗೆಟ್ ಮಾಡಿ ಮಾಡಿದ ಚಿತ್ರವೆಂಬ ಹಣೆಪಟ್ಟಿಯನ್ನು ಪಡೆದಿದೆ. ಈ ಹಿಂದೆ “ಬಾಂಬೆ ಮಿಠಾಯಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಚಂದ್ರ ಮೋಹನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೊಂದು ಪಕ್ಕಾ ಮನರಂಜನಾ ಸಿನಿಮಾವಾಗಿದ್ದು, ಮೂವರು ಅಮಾಯಕ ಯುವಕರು ಧಿಡೀರನೆ ಹಣ ಮಾಡಲು ಹೋಗಿ ಹೇಗೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದೇ ಚಿತ್ರದ ಎಳೆ. ಇನ್ನು ಚಿತ್ರದಲ್ಲಿ ಚಿಕ್ಕಣ್ಣ, ಪ್ರಭು, ಅಶೋಕ್, ಸಾಧು ಕೋಕಿಲ, ಪ್ರಿಯಾಂಕ ಮಲ್ನಾಡ್, ಸುಚೇಂದ್ರ ಪ್ರಸಾದ್, ದತ್ತಣ್ಣ, ಅಚ್ಯುತ ಕುಮಾರ್, ಶೋಭರಾಜ್ ಮತ್ತು ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ವಿಶೇಷವೆಂದರೆ, ಚಿಕ್ಕಣ್ಣ ಅವರಿಲ್ಲಿ ಸುಮನ್ ರಂಗನಾಥ್ ಅವರ ಜೊತೆ ಪರದೆಯಲ್ಲಿ ಕಾಣಿಸಿಕೊಂಡಿರುವುದು ಖುಷಿ ಕೊಟ್ಟಿದೆ. ಈಗ ಸಿನಿಮಾ ಸೆನ್ಸಾರ್ ಹಂತದಲ್ಲಿದ್ದು, ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ, ವೀರ್ ಸಮರ್ಥ್ ಸಂಗೀತ ಚಿತ್ರಕ್ಕಿದೆ. ಚಿತ್ರದ ಬೊಂಬಾಟ್ ನಾಟಿ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ