ಮೊದಲ ಬಾರಿಗೆ “ಹುಚ್ಚ’ನಾಗಿ ಕೃಷ್ಣ: ಆ್ಯಕ್ಷನ್ ಟ್ರೈಲರ್ ವೀಕ್ಷಿಸಿ
Team Udayavani, Mar 6, 2018, 5:08 PM IST
ಓಂ ಪ್ರಕಾಶ್ ರಾವ್ ನಿರ್ದೇಶನದ, ಎ.ಎಂ.ಉಮೇಶ್ ರೆಡ್ಡಿ ನಿರ್ಮಾಣದ “ಹುಚ್ಚ 2′ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಶಿವರಾಜಕುಮಾರ್ ಟ್ರೈಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ಟೀಸರ್ ಈಗಾಗಲೇ ಯುಟ್ಯೂಬ್ ಟ್ರೆಂಡಿಂಗ್ನಲ್ಲಿರುವುದರಿಂದ ಚಿತ್ರತಂಡ ಖುಷಿಯಾಗಿದ್ದು, ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡದ್ದು. ಚಿತ್ರದಲ್ಲಿ “ಮದರಂಗಿ’ ಕೃಷ್ಣ ನಾಯಕರಾಗಿ ನಟಿಸಿದ್ದು, ಶ್ರಾವ್ಯಾ ನಾಯಕಿ. ಉಳಿದಂತೆ ಚಿತ್ರದಲ್ಲಿ ಮಾಳವಿಕಾ, ಸಾಯಿಕುಮಾರ್ ಪ್ರಮುಖ ಪಾತ್ರ ಮಾಡಿದ್ದಾರೆ. ಇದು ಕೂಡಾ ಆ್ಯಕ್ಷನ್ -ಸೆಂಟಿಮೆಂಟ್ ಸಿನಿಮಾವಾಗಿದ್ದು, “ಹುಚ್ಚ’ ಚಿತ್ರದಂತೆ ಯಶಸ್ಸು ಕಾಣುವ ವಿಶ್ವಾಸ ಚಿತ್ರತಂಡಕ್ಕಿದೆ. 17 ವರ್ಷಗಳ ಹಿಂದೆ ಸುದೀಪ್ ನಾಯಕರಾಗಿದ್ದ “ಹುಚ್ಚ’ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ “ಹುಚ್ಚ-2′ ಕೂಡಾ ಅದೇ ರೀತಿ ಯಶಸ್ಸು ಕಾಣುತ್ತದೆ ಎಂಬ ನಂಬಿಕೆಯಲ್ಲಿದೆ ಚಿತ್ರತಂಡ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.