“ಕಾನೂರಾಯಣ’ದಲ್ಲೂ ಉಂಟು ಮತದಾನ ಗೀತೆ: ಚುನಾವಣಾ ಸಾಂಗ್ ವೀಕ್ಷಿಸಿ
Team Udayavani, Apr 18, 2018, 5:45 PM IST
ಶ್ರುತಾಲಯ ಫಿಲಂಸ್ ನಿರ್ಮಾಣದಲ್ಲಿ ಮೂಡಿಬಂದಿರುವ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ನಿರ್ದೇಶಿಸಿರುವ, “ಕಾನೂರಾಯಣ’ ಚಿತ್ರದ ಎಲೆಕ್ಷನ್ ಗೀತೆಯೊಂದನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಚುನಾವಣಾ ಗೀತೆ ಈಗ ವೈರಲ್ ಆಗುತ್ತಿದೆ. ಚಿತ್ರಕತೆಯಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣಾ ಪ್ರಚಾರಕ್ಕಾಗಿ ಸೃಷ್ಟಿಸಿರುವ ಈ ಹಾಡು, ಪ್ರಸ್ತುತ ಸನ್ನಿವೇಶಕ್ಕೆ ಬಹಳ ಹತ್ತಿರದಲ್ಲಿದ್ದು ಭಾರೀ ಜನಪ್ರಿಯತೆ ಪಡೆಯುತ್ತಿದೆ. ಇನ್ನು ಈ ಚಿತ್ರಕ್ಕೆ ಹರೀಶ್ ಹಾಗಲವಾಡಿ ಕಥೆ ಬರೆದರೆ, ನಾಗಾಭರಣ ಮತ್ತು ಪನ್ನಗಾಭರಣ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಕರಿಸುಬ್ಬು, ಸುಂದರ್ರಾಜ್, ಗಿರಿಜಾ ಲೋಕೇಶ್, ನೀನಾಸಂ ಅಶ್ವತ್ಥ್ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನೊಮ್ಮೆ ನೀವೂ ನೋಡಿ ಆನಂದಿಸಿ…
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !