CONNECT WITH US  

ಮೋಡಿ ಮಾಡಿತು "ಕೋಟಿಗೊಬ್ಬ-3': ಬ್ಯೂಟಿಫುಲ್ ಟೀಸರ್ ವೀಕ್ಷಿಸಿ

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ "ಕೋಟಿಗೊಬ್ಬ-3' ಚಿತ್ರತಂಡ ಸೆಪ್ಟೆಂಬರ್‌ 2ರ ಮಧ್ಯರಾತ್ರಿ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದು, ಕಿಚ್ಚನಿಗೆ ಉಡುಗೊರೆ ನೀಡಿದೆ. ಅಂತಾರಾಷ್ಟ್ರೀಯ ಕಳ್ಳನ ಪಾತ್ರದಲ್ಲಿ ಸುದೀಪ್​ ನಟಿಸಿದ್ದಾರೆ. ಅಲ್ಲದೇ ಯೂಟ್ಯೂಬ್‍ ಟ್ರೆಂಡಿಂಗ್‍ನಲ್ಲಿ ಟೀಸರ್ ನಂಬರ್ 1 ನೇ ಸ್ಥಾನದಲ್ಲಿದೆ. ಈ ಮೂಲಕ ಸುದೀಪ್‌ ಅಭಿಮಾನಿಗಳು ಸೇರಿದಂತೆ ಸಿನಿಪ್ರಿಯರು ಖುಷಿಯಾಗಿದ್ದಾರೆ. ಸೂರಪ್ಪ ಬಾಬು "ಕೋಟಿಗೊಬ್ಬ-3' ಚಿತ್ರವನ್ನು ನಿರ್ಮಿಸುತ್ತಿದ್ದು, ಶಿವಕಾರ್ತಿಕ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸುಮಾರು 40 ದಿನಗಳ ಕಾಲ ಸರ್ಬಿಯಾದಲ್ಲಿ "ಕೋಟಿಗೊಬ್ಬ-3' ಚಿತ್ರೀಕರಣವಾಗಿದೆ. ಈ ಚಿತ್ರದಲ್ಲಿ ಮಡ್ಡೋನ ಸೆಬಾಸ್ಟಿಯನ್‌ ನಾಯಕಿಯಾಗಿ ನಟಿಸುತ್ತಿದ್ದು, ಇದು ಅವರ ಮೊದಲ ಚಿತ್ರವಾಗಿದೆ. ಬಾಲಿವುಡ್‌ ನಟ ಅಫ್ತಾಬ್‌ ಶಿವದಾಸಾನಿ ನಟಿಸುತ್ತಿರುವುದು. ಈ ಚಿತ್ರದಲ್ಲಿ ಇಂಟರ್‌ಪೋಲ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗಿದು ಮೊದಲ ಕನ್ನಡ ಚಿತ್ರ. ಇನ್ನು ಚಿತ್ರದಲ್ಲಿ ಸುದೀಪ್‌, ಮಡ್ಡೋನ, ಅಫ್ತಾಬ್‌ ಜೊತೆಗೆ ನವಾಬ್‌ ಷಾ, ಶ್ರದ್ಧಾ, ರವಿಶಂಕರ್‌, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ, ಶೇಖರ್‌ ಚಂದ್ರ ಅವರ ಛಾಯಾಗ್ರಹಣವಿದೆ. ಚಿತ್ರದ ಬ್ಯೂಟಿಫುಲ್ ಟೀಸರ್ ವೀಕ್ಷಿಸಿ.

Back to Top