CONNECT WITH US  

"ಕುಮಾರಿ 21 ಎಫ್'ನಲ್ಲಿ ಡೈನಾಮಿಕ್ 2ನೇ ಪುತ್ರ: ರೊಮ್ಯಾಂಟಿಕ್ ಟ್ರೈಲರ್ ವೀಕ್ಷಿಸಿ

ಡೈನಾಮಿಕ್ ಪ್ರಿನ್ಸ್ ಎರಡನೇ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ನಟಿಸಿರುವ "ಕುಮಾರಿ 21 ಎಫ್' ಚಿತ್ರದ ಟ್ರೈಲರನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಅಲ್ಲದೇ ಯೂಟ್ಯೂಬ್‍ನಲ್ಲಿ ಟ್ರೈಲರ್ ಗೆ ಸಿನಿಪ್ರಿಯರಿಂದ ಬೊಂಬಾಟ್ ಪ್ರತಿಕ್ರಿಯೆ  ವ್ಯಕ್ತವಾಗಿದ್ದು, ಸದ್ಯದಲ್ಲೇ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗುತ್ತಿದೆ. ಈ ಚಿತ್ರವು ತೆಲುಗಿನ "ಕುಮಾರಿ 21 ಎಫ್' ರೀಮೇಕ್‌ ಆಗಿದ್ದು, ಚಿತ್ರದಲ್ಲಿ ನಾಯಕನಿಗೆ ಮುಗ್ಧ ಹುಡುಗನ ಪಾತ್ರ ಸಿಕ್ಕಿದೆ. ಏನೂ ತಿಳಿಯದೇ ಮುಗ್ಧವಾಗಿ ತನ್ನಪಾಡಿಗೆ ಇದ್ದ ಹುಡುಗನ ಲೈಫ‌ಲ್ಲಿ ಹುಡುಗಿ ಎಂಟ್ರಿಕೊಟ್ಟಾಗ ಏನೆಲ್ಲಾ ಬದಲಾವಣೆಗಳಾಗುತ್ತದೆಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಇನ್ನು ಶ್ರೀ ಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮಾರ್ ಹಾಗೂ ಶ್ರೀಧರ್ ರೆಡ್ಡಿ ಅವರು ಚಿತ್ರವನ್ನು ನಿರ್ಮಿಸಿರುವ ಈ ಚಿತ್ರವನ್ನು ಶ್ರೀಮಾನ್ ವೆಮುಲ ನಿರ್ದೆಶಿಸುತ್ತಿದ್ದಾರೆ. ಸುಕುಮಾರ್ ಕಥೆ, ಚಿತ್ರಕಥೆ, ಪ್ರಶಾಂತ್ ರಾಜಪ್ಪ ಸಂಭಾಷಣೆ, ಸಾಗರ್ ಮಹತಿ ಸಂಗೀತ ಸಂಯೋಜನೆ, ರಾಮಿ ರೆಡ್ಡಿ ಛಾಯಾಗ್ರಹಣ ಮತ್ತು ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿ ಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಟ್ರೈಲರ್ ವೀಕ್ಷಿಸಿ.

Back to Top