ಮತ್ತೆ ತೆರೆ ಮೇಲೆ “ನಾಗರಹಾವು’: ಭರ್ಜರಿ ಟೀಸರ್ ವೀಕ್ಷಿಸಿ
Team Udayavani, Jun 23, 2018, 3:01 PM IST
ಕನ್ನಡದ ಕ್ಲಾಸಿಕ್ ಚಿತ್ರವಾದ ಡಾ.ವಿಷ್ಣುವರ್ಧನ್ ಅಭಿನಯದ “ನಾಗರಹಾವು’ ಮತ್ತೆ ತೆರೆ ಮೇಲೆ ಹೊಸ ಅವತಾರದಲ್ಲಿ ಬರಲು ಸಜ್ಜಾಗಿದ್ದು, ಅದಕ್ಕೆ ಮುನ್ನುಡಿಯಾಗಿ ಚಿತ್ರದ ಟೀಸರ್ ನ್ನು ನಟ ಕಿಚ್ಚ ಸುದೀಪ್ ಸರ್ಬಿಯಾ ದೇಶದಿಂದ ತಮ್ಮ ಟ್ವೀಟರ್ ಅಕೌಂಟ್ ಮೂಲಕ ಬಿಡುಗಡೆ ಮಾಡಿದ್ದಾರೆ. ಅಲ್ಲದೇ “ವಿಷ್ಣು ಸರ್ ಒಬ್ಬ ಅಪರೂಪದ ನಟ. ಈಗಲೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿರೋ ಕಲಾವಿದ. ನನ್ನ ಪಾಲಿನ ದೇವರ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ನಾಗರಹಾವು ಮತ್ತೆ ಹೊಸ ಅವತಾರದಲ್ಲಿ ಬಂದಿದೆ. “ರಾಮಾಚಾರಿ ಈಸ್ ಬ್ಯಾಕ್’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಇನ್ನು ಹೊಸ ತಂತ್ರಜ್ಞಾನ, ವಿಷ್ಯುಯಲ್ ಎಫೆಕ್ಟ್ ಬಳಸಿಕೊಂಡು ರೂಪಿಸಿರುವ ಟೀಸರ್ನಲ್ಲಿ ಸೌಂಡು ಹೈಲೈಟಾಗಿದ್ದು, ವಿಜಯ್ ಭಾಸ್ಕರ್ ಅವರ ಸಂಗೀತದ 7.1 ಬಿಜಿಎಮ್ ಸೌಂಡ್ ಕೇಳೋದೆ ಒಂದು ಥ್ರಿಲ್ಲಾಗಿದೆ. ಇನ್ನು ಶ್ರೀ ಈಶ್ವರಿ ಪ್ರೊಡಕ್ಷನ್ ಚಿತ್ರವನ್ನು ಡಿಜಿಟಲೈಸ್ ಮಾಡಿದ್ದು, ಕಲರ್ಫುಲ್ ರಾಮಾಚಾರಿಯನ್ನು ತೆರೆಗೆ ತರಲು ರೆಡಿ ಆಗಿದೆ. ಚಿತ್ರದ ಭರ್ಜರಿ ಟೀಸರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ