CONNECT WITH US  

ಸಂಪ್ರದಾಯಸ್ಥ ಗೃಹಿಣಿಯಾಗಿ ಹರಿಪ್ರಿಯಾ: ಬ್ಯೂಟಿಫುಲ್ ಟೀಸರ್ ವೀಕ್ಷಿಸಿ

"ನೀರ್​​​ದೋಸೆ' ಸಿನಿಮಾದ ನಂತರ ಬ್ಯುಸಿಯಾಗಿರುವ ಹರಿಪ್ರಿಯಾ ಈಗ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದು, ಇದೀಗ ಅವರ ಅಭಿನಯದ "ಸೂಜಿದಾರ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್​ನಲ್ಲಿ ಹರಿಪ್ರಿಯಾ ಮತ್ತು ಯಶವಂತ್​ ಶೆಟ್ಟಿ ಪಾತ್ರಗಳ ಪರಿಚಯ​ವಿದೆ. ಹರಿಪ್ರಿಯಾ ಸಂಪ್ರದಾಯಸ್ಥ ಗೃಹಿಣಿಯ ಪಾತ್ರದಲ್ಲಿ ಮಿಂಚಿದ್ದು, ಮೊದಲಬಾರಿಗೆ ಉತ್ತರ ಕರ್ನಾಟಕ ಶೈಲಿಯ ಪಾರಂಪರಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಈಗಾಗಲೇ ಟೀಸರ್ ಯೂಟ್ಯೂಬ್‍ನಲ್ಲಿ ಸದ್ದು ಮಾಡಿದ್ದು, ಗ್ಲಾಮರಸ್​ ಗೃಹಿಣಿ ಪಾತ್ರದಲ್ಲಿ‌ ಕಾಣಿಸಿಕೊಂಡಿರುವ ಹರಿಪ್ರಿಯಾ ಪಡ್ಡೆ​​ ಹುಡುಗರ ನಿದ್ದೆ ಕೆಡಿಸಿರುವುದಂತೂ ನಿಜ. ಈಗಾಗಲೇ ಹಲವು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಯಶವಂತ್ ಶೆಟ್ಟಿ ಈ ಚಿತ್ರದಲ್ಲಿ ನಾಯಕ ನಟನಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಳ್ಳಬೇಕು ಎಂದು ಕನಸು ಕಾಣುವ ಸಾಮಾನ್ಯ ಹೆಣ್ಣುಮಗಳೊಬ್ಬಳ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇನ್ನು ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಖ್ಯಾತ ರಂಗಕರ್ಮಿ ಮೌನೇಶ್‌ ಬಡಿಗೇರ್‌. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ಇದೀಗ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಜೊತೆಗೆ ಅಚ್ಯುತ್‌ ಕುಮಾರ್‌, ಸುಚೇಂದ್ರ ಪ್ರಸಾದ್‌, ಚೈತ್ರ, ಹರೀಶ್‌ ಸಮಷ್ಠಿ, ನಾಗರಾಜ್‌ ಪತ್ತಾರ್‌ ಮುಂತಾದವರು ನಟಿಸುತ್ತಿದ್ದು, ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚೀಂದ್ರ ನಾಯಕ್ ಬೆಳ್ತಂಗಡಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಶೋಕ್‌ ವಿ. ರಾಮನ್‌ ಛಾಯಾಗ್ರಹಣ ಮತ್ತು ಭಿನ್ನಷಡ್ಜ ಸಂಗೀತ ಚಿತ್ರಕ್ಕಿದೆ. ಚಿತ್ರದ ಬ್ಯೂಟಿಫುಲ್ ಟೀಸರ್ ವೀಕ್ಷಿಸಿ.

Back to Top