CONNECT WITH US  

ಗುಟರು ಹಾಕಿದ "ಟಗರು ಬಂತು ಟಗರು': ಮಾಸ್ ಸಾಂಗ್ ವೀಕ್ಷಿಸಿ

ಸೂರಿ ನಿರ್ದೇಶನದ ಶಿವರಾಜಕುಮಾರ್‌ ನಾಯಕರಾಗಿ ಅಭಿನಯಿಸಿರುವ "ಟಗರು' ಚಿತ್ರದ ಟೈಟಲ್ ಸಾಂಗ್ "ಟಗರು ಬಂತು ಟಗರು' ಬಿಡುಗಡೆಯಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಮಾಸ್ ಪ್ರಿಯರಿಗೆ ಈ ಹಾಡು ಹುಚ್ಚು ಹಿಡಿಸುತ್ತಿದೆ. ಇನ್ನು ಸೂರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ವೀನಸ್‌ ಎಂಟರ್‌ ಟೈನರ್‌ ಮೂಲಕ ಕೆ.ಪಿ.ಶ್ರೀಕಾಂತ್‌ ನಿರ್ಮಾಣ ಮಾಡುತ್ತಿದ್ದಾರೆ. ಚರಣ್‌ರಾಜ್‌ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಶಿವರಾಜಕುಮಾರ್‌, ಮಾನ್ವಿತಾ ಹರೀಶ್‌, ಭಾವನಾರಾವ್‌, ಧನಂಜಯ್‌, ದೇವರಾಜ್‌, ವಸಿಷ್ಠ ಸಿಂಹ, ಅಚ್ಯುತ ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ಮಾಸ್ ಸಾಂಗ್ ವೀಕ್ಷಿಸಿ.

Back to Top