ಪ್ರತಿ ಜೀವಿಗೂ ಪುಣ್ಯದ ಅಪೇಕ್ಷೆ: ಮುನಿಶ್ರೀ ವೀರಸಾಗರ್‌

Team Udayavani, Jul 13, 2018, 10:54 AM IST

ಕಾರ್ಕಳ: ಮನುಷ್ಯರು ಸೇರಿದಂತೆ ಎಲ್ಲ ಜೀವಿಗಳಿಗೂ ಪುಣ್ಯ ಪ್ರಾಪ್ತಿಯಾಗಬೇಕೆಂಬ ಅಪೇಕ್ಷೆ ಇರು
ತ್ತದೆ. ಪುಣ್ಯದ ಆಸೆ ಮತ್ತು ಇಚ್ಛೆ ಯಿಂದಲೇ ಎಲ್ಲರೂ ಕೆಲಸ ನಿರ್ವ ಹಿಸುತ್ತಾರೆ. ಪಾಪಿಗಳಾಗುವ ಇಚ್ಛೆ ಯಾರಿಗೂ ಇರುವುದಿಲ್ಲ ಎಂದು ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮುನಿಮಹಾರಾಜರು ಹೇಳಿದರು.

ಕಾರ್ಕಳದಲ್ಲಿ ಜು. 27ರಿಂದ ನ. 11ರ ವರೆಗೆ ನಡೆಯಲಿರುವ ಚಾರ್ತುಮಾಸ್ಯ ವ್ರತದ ಹಿನ್ನೆಲೆಯಲ್ಲಿ ಬುಧವಾರ ತಮ್ಮ ಪುರಪ್ರವೇಶದ ಅನಂತರ ಜೈನಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಕಳದ ಈ ಪುಣ್ಯ ನಾಡಿನಲ್ಲಿ 65 ವರ್ಷಗಳ ಬಳಿಕ ಈ ಚಾತುರ್ಮಾಸ್ಯ ನಡೆಯುತ್ತಿದೆ. ಧರ್ಮ ಪ್ರವರ್ಧನೆಗೆ ಮಹತ್ತರವಾದ ಕಾಲಘಟ್ಟ ಇದು. ಒಂದೇ ಸ್ಥಳದಲ್ಲಿದ್ದುಕೊಂಡು ಧರ್ಮ ಪ್ರವರ್ಧನೆಯ ಕಾರ್ಯವನ್ನು ಚಾತು
ರ್ಮಾಸ್ಯದಲ್ಲಿ ಮಾಡಲಾಗುತ್ತದೆ. ಈ ಸಮಯದಲ್ಲಿ ಸಮು ದಾಯದ ಎಲ್ಲರೂ ಜ್ಞಾನ ವೃದ್ಧಿಪಡಿಸಿ ಕೊಳ್ಳುವುದು ಮುಖ್ಯ ಎಂದು ನುಡಿ ದರು.

ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೀರಸಾಗರ ಶ್ರೀಗಳಿಗೆ ಚಾತುರ್ಮಾಸ ಕೈಗೊಳ್ಳಲು ವಿವಿಧ ಭಾಗಗಳಿಂದ ಬೇಡಿಕೆ ಬಂದಿತ್ತು. ಆದರೆ ಶ್ರೀಗಳು ಕಾರ್ಕಳಕ್ಕೆ ಬಂದಿರುವುದು ನಮ್ಮ ಸೌಭಾಗ್ಯ. ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು. ಶ್ರೀಗಳು ಧರ್ಮಕ್ಕೆ ಸಂಸ್ಕಾರ, ಶಕ್ತಿ ತುಂಬಲಿದ್ದಾರೆ ಎಂದರು.ಸಮಿತಿಯ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್‌, ಪ್ರಮುಖರಾದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ