ಪ್ರಪಾತಕ್ಕೆ ಬಿದ್ದು ಎದ್ದ ಮುಂಬಯಿ ಶೇರು 138 ಅಂಕ ಏರಿಕೆ
Team Udayavani, Dec 18, 2017, 4:09 PM IST
ಮುಂಬಯಿ : ಗುಜರಾತ್, ಹಿಮಾಚಲ ಪ್ರದೇಶ ಚುನಾವಣಾ ಮತ ಎಣಿಕೆಯ ಅನಿರೀಕ್ಷಿತ ಆರಂಭಿಕ ಟ್ರೆಂಡ್ಗಳಿಂದ ನಲುಗಿ ತನ್ನ ಆರಂಭಿಕ ವಹಿವಾಟಿನಲ್ಲಿ 867 ಅಂಕಗಳ ಮಹಾ ಪ್ರಪಾತಕ್ಕೆ ಬಿದ್ದ ಮುಂಬಯಿ ಶೇರು ಪೇಟೆ, ಅನಂತರ ಬಿಜೆಪಿ ಪರವಾಗಿ ಮತ ಎಣಿಕೆ ಟ್ರೆಂಡ್ ಕಂಡು ಬರತೊಡಗಿದಂತೆಯೇ ನಿಧಾನವಾಗಿ ಚೇತರಿಸಿಕೊಂಡು ಇಂದು ಸೋಮವಾರದ ವಹಿವಾಟನ್ನು ಕೊನೆಗೂ 138.71 ಅಂಕಗಳ ಲಾಭದೊಂದಿಗೆ 33,601.68 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 55.50 ಅಂಕಗಳ ಲಾಭದೊಂದಿಗೆ ದಿನದ ವಹಿವಾಟನ್ನು 10,388.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 1,477 ಶೇರುಗಳು ಮುನ್ನಡೆ ಸಾಧಿಸಿದವು; 1,190 ಶೇರುಗಳು ಹಿನ್ನಡೆಗೆ ಗುರಿಯಾದವು.
ಇಂದಿನ ಟಾಪ್ ಗೇನರ್ಗಳು: ವೇದಾಂತ, ಹಿಂಡಾಲ್ಕೊ, ಸಿಪ್ಲಾ, ಮಹೀಂದ್ರ, ಸನ್ ಫಾರ್ಮಾ; ಟಾಪ್ ಲೂಸರ್ಗಳು : ಎಸ್ ಬ್ಯಾಂಕ್, ಟೆಕ್ ಮಹೀಂದ್ರ, ಎಚ್ಪಿಸಿಎಲ್, ಕೋಲ್ ಇಂಡಿಯಾ, ಯುಪಿಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್